ಬೆಂಗಳೂರು:- ಹೆಬ್ಬಾಳದ ಕನಕನಗರದಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
29 ವರ್ಷದ ಬಾಹರ್ ಅಸ್ಮಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ಎರಡು ವರ್ಷಗಳ ಹಿಂದೆ ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆತನಿಗೆ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿದೆ.
ಮಹಿಳೆ ಕುಟುಂಬಸ್ಥರು ಅಸ್ಮಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದೆ. ಘಟನೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



