ರೆಬೆಲ್ ಸ್ಟಾರ್ ಕುಟುಂಬದ ಕುಡಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಗಣ್ಯರು ಮತ್ತು ಚಿತ್ರರಂಗದವರು ಸೇರಿದಂತೆ ಹಲವರು ನಾಮಕರಣ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಂಬಿ ಮೊಮ್ಮಗನಿಗೆ ಪವರ್ ಫುಲ್ ಹೆಸರನ್ನೇ ಇಟ್ಟಿದ್ದಾರೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಿದ್ದಾರೆ.ಇದರಲ್ಲಿ ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್. ಅವರ ಮೂಲ ಹೆಸರನ್ನೇ ಮಗನಿಗೆ ಇರಿಸಿದ್ದಾರೆ ಅಭಿಷೇಕ್ ಅಂಬರೀಶ್.
ಅಭಿಷೇಕ್ ಅಂಬರೀಶ್ ಮಗನಿಗೆ ರಾಕಿಂಗ್ ಸ್ಟಾರ್ ಯಶ್ ವಿಶೇಷ ತೊಟ್ಟಿಲನನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಕೂಡ ರಾಣಾನಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ಇನ್ನು ನಾಮಕರಣ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದಾರೆ. ಹಲವು ರಾಜಕಾರಣಿಗಳು ಸಹ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ನಟ ದರ್ಶನ್ ಸಹ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಮಕರಣಕ್ಕೆ ದರ್ಶನ್ ಆಗಮಿಸದೆ ಇದ್ದಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.