ವಿಜಯಸಾಕ್ಷಿ ಸುದ್ದಿ, ಡಂಬಳ: ಮಕ್ಕಳ ಬೇಸಿಗೆ ಸಂಭ್ರಮ ಶಿಬಿರವು ಮಕ್ಕಳ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಹೇಳಿದರು.
ಡಂಬಳ ಹೋಬಳಿಯ ಚುರ್ಚಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇಸಿಗೆ ಸಂಭ್ರಮ ಶಿಬಿರದಲ್ಲಿ ದೇಶೀಯ ಸಂಸ್ಕೃತಿ ಪರಿಚಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ, ಧ್ಯಾನ, ನೃತ್ಯ, ಚಿತ್ರಕಲೆ ಜೊತೆಗೆ ದೇಶೀಯ ಕ್ರೀಡೆಗಳಾದ ಲಗೋರಿ, ಚಿನಿಮಿನಿ ಬಿಲ್ಲಿ, ಗೋಲಿಯಂತಹ ಜಾನಪದ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. ಸಾಮೂಹಿಕ ನೃತ್ಯ, ಜಾನಪದ ಹಾಡುಗಳು, ಮೋಜಿನ ಗಣಿತ, ಸೃಜನಶೀಲ ಬರವಣಿಗೆ, ಕಥೆ, ಕವನ ರಚನೆ, ರಂಗಾಟ ಮುಂತಾದ ಸಂಸ್ಕೃತಿ, ಕಲೆಗಳನ್ನು ಮಕ್ಕಳಿಗೆ ಮೂರು ದಿನದ ಶಿಬಿರದಲ್ಲಿ ಹೇಳಿಕೊಡಲಾಯಿತು.
ಮೊದಲನೇ ದಿನ ವಾಯ್.ಎನ್. ಒಸೆಕರ ಪ್ರೌಢಶಾಲಾ ದೈಹಿಕ ಶಿಕ್ಷಕರು ಮಕ್ಕಳಿಗೆ ಏರೋಬಿಕ್ಸ್ ವ್ಯಾಯಾಮವನ್ನು ಹೇಳಿಕೊಟ್ಟರು. 2ನೇ ದಿನ ಶಿಕ್ಷಕರಾದ ಎಸ್.ಆರ್. ಬಂಡಿ ಮಕ್ಕಳಿಗೆ ಚಿತ್ರಕಲೆ ಮತ್ತು ಕಥೆಗಳನ್ನು ಹೇಳಿಕೊಟ್ಟರು. 3ನೇ ದಿನ ವಿ. ಕೂಬಳ್ಳಿ ಗುರುಮಾತೆಯರು ಧ್ಯಾನ ಮತ್ತು ಯೋಗ ಹೇಳಿಕೊಟ್ಟರು. ವಿಜಯ ಕಿರೇಸೂರು ಮತ್ತು ಚಿತ್ರಕಲಾ ಶಿಕ್ಷಕರು ಮಕ್ಕಳಿಗೆ ಪೇಪರ್ ಕಟಿಂಗ್ ಹಾಗೂ ಒರಿಗಾಮಿ ಕಲೆಯ ಪರಿಚಯ ಮಾಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಬಿ.ಬಿ. ಪುರದ, ಗ್ರಾ.ಪಂ ಸದಸ್ಯ ಸಂಗನಗೌಡ ಹುಚ್ಚನಗೌಡ್ರ, ಎಸ್.ಆರ್. ಬಂಡಿ, ಪಿ.ಬಿ. ಮುಧೋಳಮಠ, ಮೋಹನ್ ಮೆಣಸಿನಕಾಯಿ, ಬಿ.ಬಿ. ಹಡಪದ, ಗೋಡಿ ಗುರುಗಳು, ಸಂಪನ್ಮೂಲ ವ್ಯಕ್ತಿ ಎಸ್.ಎಮ್. ಪಾಟೀಲ್, ಎಸ್‌ಡಿಎಂಸಿಯ ಬಸಯ್ಯ ಗದಗಿನಮಠ, ರಾಮಪ್ಪ ಹರಣಶಿಕಾರಿ, ಸಿದ್ಧಲಿಂಗಯ್ಯ ವೀರಾಪುರ, ಗೇನಯ್ಯ ಹಿರೇಮಠ, ಹುಸೇನಸಾಬ ನದಾಫ್, ಈರಣ್ಣ ಕವಲೂರ, ಪುಟ್ಟರಾಜ ನಂದಿಹಳ್ಳಿ, ಹಿರಿಯರಾದ ಸಿದ್ಧಲಿಂಗಯ್ಯ ಭೂಸನೂರಮಠ, ಶಿವಕುಮಾರ ಗದಗಿನಮಠ, ಜಂಬಯ್ಯ ವೀರಾಪುರ, ಸಿದ್ಧರಾಮಯ್ಯ ಪಾಟೀಲ, ಪರ್ವತಗೌಡ ಹಿರೇಮಠ, ಮಲ್ಲಪ್ಪ ಮಡಿವಾಳರ, ಸಣ್ಣಅಯ್ಯನಗೌಡ್ರ ಇದ್ದರು.
ಶಾಲೆಯ ಶಿಕ್ಷಕರಾದ ಆರ್.ಎಂ. ಕುಲಕರ್ಣಿ ಸ್ವಾಗತಿಸಿದರು. ಕುಮಾರ ಕೋಡಗಂಟಿ ನಿರೂಪಿಸಿದರು. ಆರ್.ಬಿ. ನದಾಫ್ ವಂದಿಸಿದರು.