ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಶಿಸ್ತು, ಮೌಲ್ಯಗಳನ್ನು ಬೆಳೆಸಲು ಮತ್ತು ಸಾಹಿತ್ಯಾಸಕ್ತಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅಭಿಪ್ರಾಯಪಟ್ಟರು.
Advertisement
ಅವರು ಇಲ್ಲಿನ ಮಲ್ಲಸಮುದ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಾ ಕಸಾಪ ಹಮ್ಮಿಕೊಂಡಿದ್ದ ಬೇಸಿಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಸಾಹಿತ್ಯ, ಕಥೆ, ಕವನಗಳನ್ನು ರಚನೆ ಮಾಡುವ ಆಸಕ್ತಿಯನ್ನು ಬೆಳೆೆಸಬೇಕಿದೆ ಎಂದರು.
ವಿ.ಎಂ. ಹಿರೇಮಠ, ಬಿ.ಕೊಣ್ಣೂರ, ಎಸ್.ಆರ್. ಬಂಡಿ, ಡಾ. ರಶ್ಮಿ ಅಂಗಡಿ, ಶಾರದಾ ಕಾರ್ತಕಿ, ಎಸ್.ಜಿ. ಚವಡಿ, ಶ್ರೀಗಿರಿ, ಸಿಆರ್‌ಪಿ ಇಮಾಮಸಾಬ ಗಾಡಗೋಳಿ, ಶಾಲಾ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.