ಭಾನುವಾರ ಪಿಡಿಒ ಪರೀಕ್ಷೆ: ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ!

0
Spread the love

ಬೆಂಗಳೂರು: ನಮ್ಮ ಮೆಟ್ರೋ ಸಂಚಾರದಲ್ಲಿ ಭಾನುವಾರ ಸಮಯ ಬದಲಾವಣೆ ಮಾಡಲಾಗಿದೆ. ಪಿಡಿಒ ಪರೀಕ್ಷೆ ಇರುವ ಹಿನ್ನೆಲೆ, ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಮೂಲಕ ಪರೀಕ್ಷಾರ್ಥಿಗಳಿಗೆ BMRCL ಗುಡ್ ನ್ಯೂಸ್ ಕೊಟ್ಟಿದೆ.

Advertisement

ಭಾನುವಾರ ಅಂದರೆ ಡಿ. 08ರಂದು ಕರ್ನಾಟಕ ಲೋಕಸೇವಾ ಆಯೋಗದ ಪಿಡಿಓ ಪರೀಕ್ಷೆ ನಡೆಯಲಿದೆ.  ಹೀಗಾಗಿ ಭಾನುವಾರ ಬೆಳಿಗ್ಗೆ 7 ಗಂಟೆ ಬದಲಾಗಿ, ಬೆಳಿಗ್ಗೆ 5:30 ರಿಂದ ಮೆಟ್ರೋ ರೈಲುಗಳ ಸಂಚಾರ ಆರಂಭಗೊಳ್ಳಲಿದೆ.

ಪ್ರತಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿತ್ತು. ಆದರೆ ಪಿಡಿಓ ಪರೀಕ್ಷೆ ಹಿನ್ನೆಲೆ ಬೆಳಿಗ್ಗೆ 5:30 ರಿಂದ ಮೆಟ್ರೋ ರೈಲುಗಳ ಸಂಚಾರ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಬಿಎಂಆರ್​ಸಿಎಲ್​ ಮೆಟ್ರೋ ರೈಲು ಸೇವೆಯನ್ನು ಬೆಳಿಗ್ಗೆ 07:00 ಗಂಟೆಗೆ ಬದಲಾಗಿ 05:30 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್​ ನಿಲ್ದಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್​ ಫೀಲ್ಡ್​ ಮೆಟ್ರೋ ನಿಲ್ದಾಣಗಳಿಂದ ಪ್ರಾರಂಭಿಸಲಿದೆ. ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕನಿಂದ ಎಲ್ಲಾ ನಾಲ್ಕು ದಿಕ್ಕಿಗೆ ಮೊದಲ ರೈಲು ಬೆಳಿಗ್ಗೆ 5:30 ಗಂಟೆಗೆ ಹೊರಡಿವೆ.


Spread the love

LEAVE A REPLY

Please enter your comment!
Please enter your name here