ರೈತರ ಹೋರಾಟಕ್ಕೆ ಬೆಂಬಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಬೆಳೆದ ಮೆಕ್ಕೆಜೋಳದ ಬೆಳೆಯನ್ನು ಖರೀದಿಸಲು ಖರೀದಿ ಕೇಂದ್ರ ಆರಂಭ, ಬೆಂಬಲ ಬೆಲೆ ಹಾಗೂ ಬೆಳೆ ಪರಿಹಾರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಲಕ್ಷ್ಮೇಶ್ವರ ಬಂದ್‌ನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್‌ಶೆಟ್ಟಿ ಸಾರಥ್ಯದಲ್ಲಿ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯನವರ ಕಾರ್ಯಾಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹಾಲಪ್ಪ ವರವಿ, ಗದಗ ಜಿಲ್ಲಾಧ್ಯಕ್ಷ ಸಣ್ಣಯಲ್ಲಪ್ಪ ವಳಗೇರಿ, ಗೌರವಾಧ್ಯಕ್ಷ ಸದಾನಂದ ನಂದೆಣ್ಣವರ, ಕುಮಾರ್ ಬೆಟಗೇರಿ, ರಮೇಶ್ ಲಮಾಣಿ, ಸಂತೋಷ್ ರಾಠೋಡ, ಮಾಲತೇಶ ರಗಟಿ, ಕೊಟ್ರೇಶ್ ನಿರಲಿಗಿಮಠ, ಮನು ಕಲಾಲ, ಶ್ರೀನಿವಾಸ ಬಸವರೆಡ್ಡಿ, ನಾಗರಾಜ್, ಕೆಂಚಪ್ಪ, ನಿಂಗಪ್ಪ ರಗಟಿ, ಮಹಮ್ಮದಲಿ ಸನದಿ, ಗೋಪಾಲ ಲಮಾಣಿ, ನಾಗೇಶ್ ಲಮಾಣಿ, ಲಕ್ಷ್ಮಣ್ ಲಮಾಣಿ, ಶರಣಪ್ಪಗೌಡ ಪಾಟೀಲ್, ಬಸು ಅತ್ತಿಗೆರಿ, ಸಿದ್ದು ಹಡಗಲಿ, ಸಂತೋಷಗೌಡ ಪಾಟೀಲ, ಹಾಲಪ್ಪ, ಮುದುಕಪ್ಪ, ಈಶ್ವರ, ಮಂಜಣ್ಣ, ರಂಗಪ್ಪ, ಹನುಮಂತ, ಫಕ್ಕೀರೇಶ, ಮಹಾಂತೇಶ, ಶಂಕರಗೌಡ, ನಿಂಗಪ್ಪ, ದುದಪೀರಾ, ನಾಗೇಶ್, ಇಮಾಮಸಾಬ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here