ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರ ರಾಜ್ಯದಲ್ಲಿರುವ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಹಲವಾರು ಬೇಡಿಕೆಗಳನ್ನು ಅನೇಕ ವರ್ಷಗಳಿಂದ ಈಡೇರಿಸದ ಕಾರಣ ಡಿ. 5ರಿಂದ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ಚಿತ್ರದುರ್ಗ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿ ಲಕ್ಷ್ಮೇಶ್ವರದ ಪೌರ ಕಾರ್ಮಿಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಕಾರ್ಮಿಕ ಮುಖಂಡ ಬಸವಣ್ಣೆಪ್ಪ ನಂದೆಣ್ಣವರ ಹೇಳಿದರು.

Advertisement

ಅವರು ಸೋಮವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ಧನಂಜಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪೌರ ಕಾರ್ಮಿಕರ ದಶಕಗಳ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ಸಂಘದ ತೀರ್ಮಾನಕ್ಕೆ ಎಲ್ಲ ಪೌರ ಕಾರ್ಮಿಕರು ಬದ್ಧರಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಈ ವೇಳೆ ಪೌರ ಕಾರ್ಮಿಕರಾದ ಹನಮಂತಪ್ಪ ನಂದೆಣ್ಣವರ, ದೇವಪ್ಪ ನಂದೆಣ್ಣವರ, ಅಶೋಕ ನಡುಗೇರಿ, ವಿಶ್ವನಾಥ ಹಾದಿಮನಿ, ರಾಜು ನಂದೆಣ್ಣವರ, ಹನುಮಂತಪ್ಪ ಅಡಗಿಮನಿ, ಮಂಜುನಾಥ ಗಡದವರ, ಅನಿಲ ನಂದೆಣ್ಣವರ, ಆಂಜನೇಯ ರಾಥೋಡ, ಕುಮಾರ ಹಾದಿಮನಿ, ಪ್ರಕಾಶ ಹಿತ್ತಲಮನಿ, ಕುಮಾರ ನಂದೆಣ್ಣವರ ಮುಂತಾದವರು ಇದ್ದರು.


Spread the love

LEAVE A REPLY

Please enter your comment!
Please enter your name here