ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೇತನ ವಿಳಂಬ ಹಾಗೂ ಸೇವಾಭದ್ರತೆ ಕುರಿತಂತೆ ಲಕ್ಷ್ಮೇಶ್ವರ ತಾ.ಪಂ ಆವರಣದಲ್ಲಿ ಹಮ್ಮಿಕೊಂಡಿರುವ ಅಸಹಕಾರ ಚಳವಳಿಗೆ ನರೇಗಾ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ಸುರೇಶ ಬಾಳಿಕಾಯಿ ಮಂಗಳವಾರ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ನರೇಗಾ ಸಿಬ್ಬಂದಿಗಳು ವೇತನವಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಸೇವಾ ಭದ್ರತೆಯೂ ಇಲ್ಲದ್ದರಿಂದ ಭವಿಷ್ಯದ ಚಿಂತೆ ಕಾಡುತ್ತಿದೆ. ರಾಜ್ಯ ಹಾಗೂ ಆಯುಕ್ತರ ಇಲಾಖೆಯಿಂದ ಬಂದ ಮಾಹಿತಿ ಪ್ರಕಾರ ಇನ್ನೆರಡು ದಿನಗಳಲ್ಲಿ ವೇತನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ವೇತನ ಆಗುವವರೆಗೂ ಅಸಹಕಾರ ಚಳುವಳಿಗೆ ನಮ್ಮ ಬೆಂಬಲ ಇರುತ್ತದೆ. ರಾಜ್ಯ ನರೇಗಾ ಸಂಘದ ನಿರ್ದೇಶನದಂತೆ ನಾವೆಲ್ಲರೂ ನಡೆಯಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಇಲಾಖೆಯ ವೃಂದ ಸಂಘಗಳು, ಪಿಡಿಓ ಹಾಗೂ ಸೆಕ್ರೆಟರಿ ವೃಂದ ಸಂಘ, ಬಿಎಫ್ಟಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಡಿಇಓ ಸಂಘದ ತಾಲೂಕಾ ಘಟಕಗಳು ಬೆಂಬಲ ನೀಡಿದವು.
ಈ ವೇಳೆ ಹರೀಶ ಸೊಬರದ, ಮೋಹನಕುಮಾರ ಹೊಂಬಾಳ, ಮಂಜುನಾದಸ್ವಾಮಿ ಹಂಜಿಗಿಮಠ, ಶ್ರೀಧರ್ ಕುಲಕರ್ಣಿ, ಫಕೀರೇಶ ನಿಟ್ಟಾಲಿ, ಮಂಜುನಾಥ ತಳವಾರ, ಶ್ರೀನಿವಾಸ್ ಕಲಾಲ್, ಭರಮಗೌಡ್ರು, ಹುಲಿಗಪ್ಪ ಭಜಂತ್ರಿ, ಖಾಸಿಮಸಾಬ್ ನದಾಫ್, ಸತೀಶ ಅರಿಶಿಣದ, ತಿರುಕಪ್ಪ ಬಾಲೆಹೊಸೂರ, ಶಿಲ್ಪಾ ಲಮಾಣಿ, ಮಹಾಂತೇಶಗೌಡ ಪಾಟೀಲ, ಭಾರತಿ ಯಂಗಾಡಿ, ಶಿವಕ್ಕ ಮಾದರ, ಗಂಗವ್ವ ಹರಿಜನ, ಮಂಜುಳಾ ಕಟ್ಟಿಮನಿ, ನಿರ್ಮಲ ಚಿಣಗಿ, ಗೌರಮ್ಮ ಲಮಾಣಿ, ಪರಮೇಶ್ ಲಮಾಣಿ, ವಿನೋದ್ ಕುಮಾರ್ ಲಮಾಣಿ, ಭೀಮಪ್ಪ ರಾಥೋಡ, ಸೋಮು ತಳವಾರ ಪಾಲ್ಗೊಂಡಿದ್ದರು.