ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರಧಾನಿ ಮೋದಿಯವರ ಸೂಚನೆಯ ಹಿನ್ನೆಲೆಯಲ್ಲಿ ಭಾರತದ ಸೇನೆಯು ಪಾಕಿಸ್ತಾನದ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಉಗ್ರರನ್ನು ಬಲಿ ತೆಗೆದುಕೊಂಡಿದೆ. ಭಾರತದ ರಕ್ಷಣೆಗೆ ಹಾಗೂ ಭಾರತದ ಮಹಿಳೆಯರ ನೋವಿನ ಪ್ರತೀಕಾರವಾಗಿ ಶತ್ರುಗಳನ್ನು ನಾಶಪಡಿಸಿದ ಪ್ರಧಾನಿ ಮೋದಿ ದೃಢ ಸಂಕಲ್ಪಕ್ಕೆ ನಾವೆಲ್ಲಾ ಬೆಂಬಲವಾಗಿ ಸಹಕಾರ ನೀಡಬೇಕೆಂದು ಬಿಜೆಪಿ ಡಂಬಳ ಮಂಡಳದ ಅಧ್ಯಕ್ಷ ಅಂದಪ್ಪ ಹಾರೂಗೇರಿ ಹೇಳಿದರು.
ಡಂಬಳ ಹೋಬಳಿಯ ಮೇವುಂಡಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಪಹಲ್ಗಾಮ್ ಘಟನೆಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ವಿರುದ್ಧ ಯಶಸ್ವಿಯಾಗಿ ಪ್ರತೀಕಾರ ನೀಡಿದ ಹಿನ್ನೆಲೆಯಲ್ಲಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಪಾಕಿಸ್ತಾನ ಪೋಷಿತ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಪಾಕಿಸ್ತಾನದಲ್ಲಿ ಎಲ್ಲೇ ರಕ್ಷಣೆ ಪಡೆದಿದ್ದರೂ ಬಿಡದೆ ನುಗ್ಗಿ ನಾಶಪಡಿಸಬೇಕು. ಭಯೋತ್ಪಾದಕರ ವಿರುದ್ಧ ಭಾರತವು ಗೆಲ್ಲಬೇಕು. ವಿಶ್ವದ ಎಲ್ಲಾ ದೇಶಗಳ ಇಚ್ಛೆಯೂ ಇದೇ ಆಗಿದ್ದು, ಗೆಲ್ಲುವ ವಿಶ್ವಾಸ ಎಲ್ಲರಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುದ್ಲಿಂಗಪ್ಪ ಕೊರ್ಲಹಳ್ಳಿ, ಚೆನ್ನಪ್ಪಗೌಡ ಕಂಬಳಿ, ಮೈಲಾರಪ್ಪ ನೋಟಗಾರ, ಚೆನ್ನವೀರಪ್ಪ ಚಿನ್ನೂರ, ಪ್ರವೀಣ ವಡ್ಡಟ್ಟಿ, ರವಿ ಕರಿಗಾರ, ಮಲ್ಲಣಗೌಡ ಸಿಂಗಟಾಲೂರ, ಅಂದಪ್ಪ ಡುಮ್ಮನ್ನವರ, ವೀರೇಂದ್ರಗೌಡ ಪಾಟೀಲ, ಹನಮಪ್ಪ ಉಪ್ಪಾರ, ಈರಪ್ಪ ಅರಕಲ್ಲ, ಗೋಪಾಲ ವಾಲಿಕಾರ, ಶ್ರೀಶೈಲಪ್ಪ ಕೊರ್ಲಹಳ್ಳಿ, ಪ್ರಭು ಕೋರ್ಲಹಳ್ಳಿ, ಶರಣಪ್ಪ ಹೂಗಾರ, ಮೈಲಾರಪ್ಪ ಜೋಶಿ, ದೇವಪ್ಪ ಕಂದಗಲ್ಲ, ಈಶಪ್ಪ ಜಂತ್ಲಿ, ಕೋಟೇಶ ಸಿಂದೋಗಿ, ರಮೇಶ ಕಮತರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.