ಬುರುಡೆ ಗ್ಯಾಂಗ್‌ʼಗೆ ಸುಪ್ರೀಂ ಛೀಮಾರಿ ವಿಚಾರ: ಗೃಹ ಸಚಿವರು ಹೇಳಿದ್ದೇನು?

0
Spread the love

ಬೆಂಗಳೂರು:- ಬುರುಡೆ ಗ್ಯಾಂಗ್‌ಗೆ ಸುಪ್ರೀಂ ಛೀಮಾರಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬುರುಡೆ ಗ್ಯಾಂಗ್‌ಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾತನಾಡಿ,

Advertisement

ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ. ತಿಳಿದುಕೊಂಡು ಮಾತನಾಡದೇ ಹೋದರೆ ಹೋದ್ರೆ ಸಚಿವರಿಗೆ ಏನು ಗೊತ್ತಿಲ್ಲ ಎನ್ನುತ್ತೀರಿ. ತಿಳಿದುಕೊಂಡು ಅಮೇಲೆ ಮಾತನಾಡುತ್ತೇನೆ ಎಂದು ಉತ್ತರ ನೀಡಿದ್ದಾರೆ.

ಘಟನೆ ವಿವರ

ಕಳೆದ ಏಪ್ರಿಲ್‌ 30 ರಂದು ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯಿಸಿ ಬುರುಡೆ ಗ್ಯಾಂಗ್‌ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ಮೇ 5ರಂದೇ ಸುಪ್ರೀಂ ಕೋರ್ಟ್‌ ಬುರುಡೆ ಗ್ಯಾಂಗ್‌ಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿತ್ತು.

ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ, ವೈಯಕ್ತಿಕ ಹಿತಾಸಕ್ತಿ ಕಾಣಿಸುತ್ತಿದೆ. ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಷನ್ ಎಂದು ಬುರುಡೆ ಗ್ಯಾಂಗ್‌ಗೆ ತಪರಾಕಿ ಹಾಕಿತ್ತು.

ನಾಚಿಕೆ ಮಾನಾ ಮರ್ಯಾದೆ ಎಲ್ಲವನ್ನೂ ಬಿಟ್ಟು ಬಂದು ದೂರು ನೀಡಿದ್ದೀರಿ ದಶಕಗಳು ಕಳೆದ ಬಳಿಕ ತಡವಾಗಿ ಯಾಕೆ ಈ ಅರ್ಜಿ ಸಲ್ಲಿಸಿದ್ದೀರಿ ಎಂದು ಗ್ಯಾಂಗನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಾರಾಸಗಟಾಗಿ ಅರ್ಜಿಯನ್ನ ತಿರಸ್ಕರಿಸಿತ್ತು.


Spread the love

LEAVE A REPLY

Please enter your comment!
Please enter your name here