ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೧ ಆರೋಪಿ ಪವಿತ್ರಾ ಗೌಡಗೆ ಮತ್ತೆ ಸಂಕಷ್ಟು ಎದುರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ ೧೯ ಜನರಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅದರ ವಾದ ಪ್ರತಿವಾದ ಇಂದು ನಡೆದಿದ್ದು ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪವಿತ್ರಗೌಡಗೆ ಸಂಬಂಧಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ್ದು ಈ ಘಟನೆ ನಡೆದಿರುವುದು ಪವಿತ್ರಾ ಗೌಡ ಅವರಿಂದಲೇ ಎಂದು ಹೇಳಿದೆ. ಅಲ್ಲದೆ ಎಲ್ಲಾ ಸಮಸ್ಯೆಗೆ ಪವಿತ್ರಾ ಗೌಡನೇ ಕಾರಣವಾಗಿದ್ದು ಕರ್ನಾಟಕ ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನಡುವೆ ವಿಚಾರಣೆ ಮಧ್ಯದಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ಸಂಬಂಧದ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ವಕೀಲರ ಬಳಿ ಪ್ರಶ್ನಿಸಿದೆ.
ಪವಿತ್ರಾ ಗೌಡ ದರ್ಶನ್ಗೆ 50 ಬಾರಿ ಕಾಲ್ ಮಾಡಿದ್ದು ಏಕೆ? ಪವಿತ್ರಾಗೌಡಗೆ ಮೊದಲ ಮದುವೆ ಡಿವೋರ್ಸ್ ಆಗಿದೆಯಾ? ಪವಿತ್ರಾಗೌಡ ಏನು ಮಾಡುತ್ತಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಮಾಡಿದೆ. ಈ ವೇಳೆ ಪವಿತ್ರಾಗೌಡ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ವಾದ ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ಪ್ರಕಟಿಸೋದಾಗಿ ಹೇಳಿದೆ.