ಓಯೋ ರೂಮ್’ಗೆ ಕರೆಸಿ ಪ್ರಿಯತಮೆ ಬರ್ಬರ ಹತ್ಯೆ..! 17 ಬಾರಿ ಇರಿದು ಕೊಂದ ಕಿರಾತಕ

0
Spread the love

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜರುಗಿದೆ.ಹರಿಣಿ (33) ಕೊಲೆಯಾದ ಮಹಿಳೆ. ಸಾಫ್ಟ್‌ವೇರ್ ಇಂಜಿನಿಯರ್​ ಯಾಗಿರುವ ತಲಘಟ್ಟಪುರದ ನಿವಾಸಿ ಯಶಸ್ (25) ಕೊಲೆ ಆರೋಪಿಯಾಗಿದ್ದು, ಆತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಗೃಹಿಣಿ ಹರಿಣಿ ಇದ್ದ ಏರಿಯಾ ಜಾತ್ರೆಗೆ ಟೆಕ್ಕಿ ಯಶಸ್ ಹೋಗಿದ್ದರು. ಈ ವೇಳೆ ಹರಿಣಿ ಪರಿಚಯವಾಗಿ ಫೋನ್​ ನಂಬರ್​​ ಪಡೆದಿದ್ದರು. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಹಲವು ಬಾರಿ ಇದೇ ರೀತಿ ಭೇಟಿಯಾಗಿ ಫೋನ್​ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿತ್ತು. ಹರಿಣಿ ಫೋನ್​ ಕಿತ್ಕೊಂಡಿದ್ದ ದಾಸೇಗೌಡ ಮನೆಯಲ್ಲೇ ಕೂಡಿ ಹಾಕಿದ್ದರು.

ಬಳಿಕ ಕೆಲವು ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ಈ ವೇಳೆ ತನ್ನ ಬಾಯ್​ಫ್ರೆಂಡ್ ಯಶಸ್ ಸಂಪರ್ಕಿಸಿದ್ದಾರೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಪ್ರಿಯಕರ ಯಶಸ್​, ಸಿಕ್ಕರೆ ಸಾಯಿಸಲು ನಿರ್ಧರಿಸಿದ್ದ. ಹೀಗಾಗಿ ಹರಿಣಿಯನ್ನು ಕೊಲೆ ಮಾಡಲು ಚಾಕು ಕೂಡ ಖರೀದಿಸಿದ್ದ.

ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್​ಗೆ ಹೋಗಿದ್ದರು. ಮೊದಲೇ ರಾಯಲ್ಸ್ ಹೋಟೆಲ್​ನಲ್ಲಿ ರೂಮ್​ ಬುಕ್ ಮಾಡಿದ್ದ ಯಶಸ್, ಹೋಟೆಲ್​ಗೆ ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹತ್ಯೆಗೈದಿದ್ದಾನೆ. ವಿಷಯ ತಿಳಿದು ಹೋಟೆಲ್​ಗೆ ಭೇಟಿ ನೀಡಿದ್ದ ಸುಬ್ರಹ್ಮಣ್ಯಪುರ ಪೊಲೀಸರು, ಬಳಿಕ ಎಫ್​ಎಸ್​ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹರಿಣಿ ಅವೈಡ್​ ಮಾಡಿದ್ದಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.


Spread the love

LEAVE A REPLY

Please enter your comment!
Please enter your name here