ಬೆಂಗಳೂರು: ಹೆಂಡತಿಯ ಶೀಲ ಶಂಕಿಸಿ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ 55 ವರ್ಷದ ದೇವಿಕಾ ಮೃತರಾಗಿದ್ದು, ಪತಿ ಕುಮಾರ್ (65) ಮಧ್ಯರಾತ್ರಿ 12:45ರ ಸುಮಾರಿಗೆ ಪತ್ನಿ ಮಲಗಿದ್ದಾಗ ಅವಳ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ತಾಜಾ ಮಾಹಿತಿ ಪ್ರಕಾರ, ದೇವಿಕಾ ಸಮೀಪದಲ್ಲಿ ಕುಟುಂಬ ಸಮೇತ ಶಬರಿಮಲೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪತ್ನಿ ಡ್ರೈವರ್ ಜೊತೆ ಮಾತನಾಡುತ್ತಿದ್ದುದರಿಂದ ಪತಿ ಅನುಮಾನಗೊಂಡಿದ್ದರು. ಬಳಿಕ ಹೆಂಡತಿ ಮೇಲೆ ಅನುಮಾನಿಸಿ ಗಲಾಟೆ ಮಾಡುತ್ತಿದ್ದ. ಪತ್ನಿಯನ್ನು ಕೊಂದ ಬಳಿಕ ಆರೋಪಿ ಕುಮಾರ್ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆರೋಪಿ ಕುಮಾರ್‌ನನ್ನು ಮಕ್ಕಳು ತಡೆದಿದ್ದಾರೆ.
ಘಟನೆ ಸಂಬಂಧ ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಗಂಡ ಕುಮಾರ್ ಪೊಲೀಸ್ ಬಂಧನದಲ್ಲಿ ಇರಿಸಿಕೊಂಡಿದ್ದಾರೆ.



