HomeGadag Newsಪಿಎಸ್‌ಐ ರಿತ್ತಿಯವರನ್ನು ಕೂಡಲೇ ಅಮಾನತುಗೊಳಿಸಿ: ರಾಜು ಖಾನಪ್ಪನವರ

ಪಿಎಸ್‌ಐ ರಿತ್ತಿಯವರನ್ನು ಕೂಡಲೇ ಅಮಾನತುಗೊಳಿಸಿ: ರಾಜು ಖಾನಪ್ಪನವರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಬಳ್ಳಾರಿ ಪೊಲೀಸರಿಗೊಂದು ನ್ಯಾಯ, ಗದಗ ಜಿಲ್ಲೆಯ ಪೊಲೀಸರಿಗೊಂದು ನ್ಯಾಯ ಮಾಡುತ್ತಿದೆಯೆಂದು ಹಿಂದೂ ಸಂಘಟನೆಗಳ ಮುಖಂಡ ರಾಜು ಖಾನಪ್ಪನವರ ಆರೋಪಿಸಿದರು.

ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಇಬ್ಬಂದಿ ನೀತಿಯನ್ನು ಖಂಡಿಸಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಕೆಲವೆಡೆ ಸರ್ಕಾರ ನಾಮಕಾವಾಸ್ತೆ → ನಾಮಕಾವಸ್ತೆ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಂತೆ ನಾಟಕವಾಡಿ ತನ್ನ ವೈಫಲ್ಯವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದರು.

ಗಣಿನಾಡು ಬಳ್ಳಾರಿಯಲ್ಲಿ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ನಾ.ರಾ. ಭರತ್‌ರೆಡ್ಡಿ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಅಂದೇ ಕರ್ತವ್ಯಕ್ಕೆ ಹಾಜರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ ನೆಜ್ಜೂರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಬಳ್ಳಾರಿ ಶಾಸಕ ನಾ.ರಾ. ಭರತ್‌ರೆಡ್ಡಿಯನ್ನು ಸಂತುಷ್ಟಗೊಳಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಶಾಂತಿಯುತವಾಗಿ ಓಂ ಶಕ್ತಿ ಮಾಲಾಧಾರಿಗಳು ನಡೆಸುತ್ತಿದ್ದ ಮೆರವಣಿಗೆಯ ಮೇಲೆ ದುಷ್ಟ ಮುಸ್ಲಿಂ ಮತಾಂಧರು ಕಲ್ಲೆಸೆದು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಪ್ರಕರಣದಲ್ಲಿಯೂ ಸಹ ಇದುವರೆಗೆ ಯಾವುದೇ ವ್ಯಕ್ತಿ, ಸಂಘಟನೆಯ ಮೇಲೆ ಪ್ರಕರಣ ದಾಖಲಿಸುವುದಾಗಲಿ, ಗಲಭೆಗೆ ಪ್ರಯತ್ನಿಸಿದವರನ್ನು ಬಂಧಿಸುವುದಾಗಲಿ ನಡೆದಿಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮುಸ್ಲಿಮರ ತುಷ್ಟೀಕರಣವನ್ನು ತೋರುತ್ತದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಹೇಶ್ ರೋಖಡೆ, ಹುಲಿಗೆಪ್ಪ ವಾಲ್ಮೀಕಿ, ಬಸವರಾಜ್ ಕುರ್ತಕೊಟ್ಟಿ, ಈಶ್ವರ್ ಕಾಟವಾ, ಕುಮಾರ್ ನಡಗೇರಿ, ವೆಂಕಟೇಶ್ ದೊಡ್ಮನಿ, ಭರತ ಲದ್ದಿ, ಈರಣ್ಣ ಪೂಜಾರ, ಎಸ್.ಪಿ. ಕಾಳೆ, ಕಿರಣ್ ಹಿರೇಮಠ, ಸತೀಶ್ ಕುಂಬಾರ್, ಮುದುಕಪ್ಪ ದೊಡ್ಮನಿ, ಬಸವರಾಜ್ ಬನ್ನಿಮರದ, ಅಭಿಲಾಷ್ ಗುಜ್ಮಾಗಡಿ, ಸಂಜು ಚಟ್ಟಿ, ಕೃಷ್ಣ ಹುಯಿಲಗೋಳ, ಮಹಾಬಲೇಶ್ವರ ಶೆಟ್ಟರ್, ಮೌನೇಶ್ ದಾಸರ್, ಈರಪ್ಪ ವಾಲ್ಮೀಕಿ, ರಾಜು ಗದ್ದಿ, ಮಂಜು ಗುಡಿಮನಿ, ಈರಣ್ಣ ಗಾಣಿಗೇರ್ ಮುಂತಾದವರಿದ್ದರು.

ಈ ಹಿನ್ನೆಲೆಯಲ್ಲಿ, ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಗಿಸಿ ಮನೆಗೆ ತೆರಳುತ್ತಿದ್ದ ಮುಗ್ಧ ರೈತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ 32 ಸಾವಿರ ರೂಪಾಯಿಗಳನ್ನು ಲೂಟಿ ಮಾಡಿದ ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಮೇಲೆ ಇದುವರೆಗೂ ಯಾವುದೇ ಕ್ರಮ ಜರುಗಿಸದಿರುವುದು ಅತ್ಯಂತ ವಿಷಾದನೀಯ. ಪಿಎಸ್‌ಐ ಈರಣ್ಣ ರಿತ್ತಿಯನ್ನು ಸರ್ಕಾರ ಕೂಡಲೇ ಅಮಾನತುಗೊಳಿಸಬೇಕು. ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಯ ಮೇಲೆ ಕಲ್ಲೆಸೆದ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಿಸಿ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಬೇಕೆಂದು ರಾಜು ಖಾನಪ್ಪನವರ ಆಗ್ರಹಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!