ಹಾವೇರಿ:- ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ 10ಕ್ಕೂ ಹೆಚ್ಚು ಜನರಿದ್ದ ಗ್ಯಾಂಗ್ ಒಂದು ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ಗ್ರಾಮದಲ್ಲಿ ಜರುಗಿದೆ.
ಕರೆಂಟ್ ಕಂಬಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಿ ಕಾಲಿನ ಕೆಳಗೆ ಬೆಂಕಿ ಹಾಕಿ ಹೀನಾಯವಾಗಿ ಥಳಿಸಿ ಕೊಲೆ ಮಾಡಲಾಗಿದೆ. 48 ವರ್ಷದ ಪ್ರಕಾಶ ಓಲೇಕಾರ ಹತ್ಯೆಯಾದ ದುರ್ದೈವಿ.
ಮೃತ ಪ್ರಕಾಶ್, ಅದೇ ಗ್ರಾಮದ ಮತ್ತೊಂದು ಕುಟುಂಬದ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಹತ್ತಕ್ಕೂ ಅಧಿಕ ಜನರಿಂದ ವ್ಯಕ್ತಿಯ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತ ಹಾನಗಲ್ ಪೊಲೀಸ್ ಠಾಣೆಯಲ್ಲಿ 11 ಜನರ ಮೇಲೆ ದೂರು ನೀಡಲಾಗಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



