ಚಿತ್ರದುರ್ಗ:- ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಪತ್ನಿಯ ಮೇಲೆ ಅನುಮಾನಿಸಿದ ಪತಿಯು, ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಜರುಗಿದೆ.
Advertisement
ನಾಗೇಶ್ ಎಂಬಾತನೇ ಕ್ರೌರ್ಯ ಮೆರೆದ ಪತಿ. ಈತನು ತನ್ನ ಪತ್ನಿ ಪೂಜಾ ಮೇಲೆ ಅನುಮಾನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮುದ್ದೆ ಕೋಲಿನಿಂದ ಹೊಡೆದದ್ದಲ್ಲದೇ ದೇಹದ ಹಲವು ಭಾಗಗಳಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ ಎಂದು ಹೇಳಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಮೊಳಕಾಲ್ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ನಾಗೇಶ್ ವಿರುದ್ದ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.