ನವದೆಹಲಿ:– ನವದೆಹಲಿಯಲ್ಲಿ ವಿಚಿತ್ರ ಘಟನೆ ಜರುಗಿದೆ. ಮಗಳಿಗೆ ಬಾಯ್ಫ್ರೆಂಡ್ ಇದ್ದಾನೆಂಬ ಅನುಮಾನದಿಂದ ಪೋಷಕರು ಗೂಢಚಾರಿ ನೇಮಿಸಿದ್ದರು. ಬಳಿಕ ಗೂಢಚಾರಿ ಹೇಳಿದ ಸತ್ಯ ಕೇಳಿ ಪೋಷಕರು ಬೆಚ್ಚಿಬಿದ್ದಿದ್ದಾರೆ.
ದೆಹಲಿಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಹುಡುಗಿಯೊಬ್ಬಳಿಗೆ ಗೆಳೆಯನಿದ್ದಾನೆ ಎಂದು ಆಕೆಯ ಹೆತ್ತವರು ಪದೇ ಪದೆ ಅನುಮಾನಿಸುತ್ತಿದ್ದರು. ಆದರೆ ಆಕೆ ಏನೂ ಹೇಳುತ್ತಿರಲಿಲ್ಲ.ಹಾಗಾಗಿ ಅವರು ತನ್ನನ್ನು ಗೂಢಚಾರರಾಗಿ ನೇಮಿಸಿಕೊಂಡಿದ್ದರು. ನೀವು ಆಕೆಯ ಮೇಲೆ ನಿಗಾ ಇರಿಸಿ ಆ ಹುಡುಗಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿ ಎಂದು ಕೇಳಿಕೊಂಡಿದ್ದರು. ನಾಲ್ಕನೇ ದಿನ, ಅವಳು ಜಿಟಿಬಿ ನಗರಕ್ಕೆ ಹೋಗಿದ್ದಳು, ಅಂತಿಮವಾಗಿ, ಅವಳು ಅಲ್ಲಿಗೆ ತಲುಪಿದಾಗ, ಅವಳು ವೇಶ್ಯಾಗೃಹಗಳು ಅಥವಾ ವೇಶ್ಯೆಯರಿರುವ ಪ್ರದೇಶವನ್ನು ತಲುಪಿದ್ದಾಳೆಂದು ನಮಗೆ ಅರಿವಾಯಿತು.
ನನಗೆ ನನ್ನ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ.ಆಕೆ ಹೆಚ್ಚು ಪಾಕೆಟ್ ಮನಿ, ಹಣವನ್ನು ಬಯಸಿದ್ದರಿಂದ ಈ ವೃತ್ತಿ ಆರಿಸಿಕೊಂಡಿದ್ದಾಳೆ ಎಂಬ ಅರಿವಾಯಿತು. ಆಕೆಯ ಸ್ನೇಹಿತರು ಐಷಾರಾಮಿ ಪಾರ್ಟಿ ಮಾಡುತ್ತಿದ್ದರು, ಶಾಪಿಂಗ್ಗೆ ಹೋಗುತ್ತಿದ್ದರು, ಈಕೆ ಹೆತ್ತವರ ಜತೆ ಮಾಲ್ಗೆ ಹೋಗುತ್ತಿರಲಿಲ್ಲ, ರೆಸ್ಟೋರೆಂಟ್ಗೆ ಊಟಕ್ಕೆ ಹೋಗುತ್ತಿರಲಿಲ್ಲ.ಆಕೆಗೆ ಹಣ ಬೇಕಿತ್ತು ಹೀಗಾಗಿ ಈ ತಪ್ಪು ವೃತ್ತಿಯನ್ನು ಆರಿಸಿಕೊಂಡಿದ್ದಾಳೆ.
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಪೋಷಕರಿಗೆ ಗೂಢಚಾರಿಗಳನ್ನು ನೇಮಿಸಿಕೊಳ್ಳಲು ಹಣವಿರುತ್ತದೆ ಎಂದರೆ ಆಕೆಗೆ ಆ ಹಣವನ್ನು ಕೊಟ್ಟಿದ್ದರೆ ಆಕೆ ಈ ದಾರಿಗೆ ಇಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.