ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಅನುಮಾನಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಜುನಾಥ್ (36) ಮೃತ ವ್ಯಕ್ತಿ. ಜಮೀನಿನಲ್ಲಿ ತಂದೆ-ಮಗ ಕೆಲಸ ಮಾಡುತ್ತಿದ್ದರು. ಬಳಿಕ ಜಮೀನಿನಿಂದ ಮಧ್ಯಾಹ್ನ ಊಟಕ್ಕೆಂದು ತಂದೆ ಮನೆಗೆ ತೆರಳಿದ್ದ.
Advertisement
ಆದರೆ, ಮಂಜುನಾಥ್, ಜಮೀನಿನಲ್ಲಿ ಅಣಬೆ ಹುಡುಕುತ್ತಿದ್ದ. ತಂದೆಯ ಊಟ ಮುಗಿದು ಎಷ್ಟು ಹೊತ್ತಾದರೂ ಮನೆಗೆ ಮಗ ಬರಲಿಲ್ಲ. ಹೀಗಾಗಿ ಹುಡುಕಿಕೊಂಡು ಹೋದಾಗ ಮಂಜುನಾಥ್ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.