ಕೋಲಾರ: ಕೋಲಾರ ತಾಲ್ಲೂಕಿನ ಎಂ. ಮಲ್ಲಂಡಹಳ್ಳಿ ಗ್ರಾಮದ ಬಳಿ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಲು ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀಕಾಂತ್ (35) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕನಾಗಿದ್ದು,
Advertisement
ನಿನ್ನೆ ಉಳುಮೆ ಮಾಡಲು ತೆರಳಿದ್ದ ಯುವಕ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾನೆ. ಇತ್ತೀಚೆಗೆ ಕುಟುಂಬದಲ್ಲಿ ಜಮೀನು ವಿವಾದವಿತ್ತು ಈ ಹಿನ್ನೆಲೆ ಕೊಲೆ ಮಾಡಿರುವ ಅನುಮಾನವಿದ್ದು,
ಟ್ರಾಕ್ಟರ್ ಕೃಷಿಹೊಂಡಕ್ಕೆ ಬಿದ್ದಿದ್ದು, ಯುವಕನ ಶವ ಹೊರಗೆ ಬಿದ್ದಿದೆ. ಇದರಿಂದ ಸಾಕಷ್ಟು ಅನುಮಾನಗಳು ಮೂಡಿವೆ. ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.