ಅನ್ನದಾನೀಶ್ವರ ಶ್ರೀಗಳಿಗೆ ‘ಸುವರ್ಣಗಿರಿ ಪ್ರಶಸ್ತಿ’ ಪ್ರದಾನ ಇಂದು

0
annadani
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೊಪ್ಪಳ ಜಿಲ್ಲೆಯ ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ವಿಶ್ವಗುರು ಬಸವೇಶ್ವರರ 891ನೇ ಜಯಂತ್ಯುತ್ಸವದ ನಿಮಿತ್ತ `ಸುವರ್ಣಗಿರಿ ವೈಭವ’ ಕಾರ್ಯಕ್ರಮ ಮೇ 10ರಂದು ನಡೆಯಲಿದೆ.

Advertisement

ಸಂಜೆ 5ಕ್ಕೆ ಜರುಗುವ ಸುವರ್ಣಗಿರಿ ಪ್ರಶಸ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಅವರಿಗೆ ‘ಸುವರ್ಣಗಿರಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಜಾಲಹಳ್ಳಿ ಬೃಹನ್ಮಠದ ಜಯಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಹಲಿಂಗ ಸ್ವಾಮೀಜಿ, ಡಾ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

 


Spread the love

LEAVE A REPLY

Please enter your comment!
Please enter your name here