ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜದಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳಲ್ಲಿ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದ್ದು, ತಿಳುವಳಿಕೆ ಕೊರತೆಯಿಂದ ರೋಗಗಳು ಹರಡುತ್ತಿವೆ. ಇಂತಹ ಸಮಸ್ಯೆಗಳ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದು ಡಾ. ವ್ಹಿ.ಎ. ನಿಂಗೋಜಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಪಂ. ಪಂಚಾಕ್ಷರ ಗವಾಯಿಗಳವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ವಚ್ಛಾತಾ ಹೀ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂತಹ ತಿಳುವಳಿಕೆ ಮೂಡಿಸುವಲ್ಲಿ ಪ್ರಭಾವಶಾಲಿ ವಿಧಾನಗಳಲ್ಲಿ ಬೀದಿ ನಾಟಕಗಳು ಒಂದಾಗಿವೆ. ಬೀದಿ ನಾಟಕಗಳ ಪ್ರದರ್ಶನದಿಂದ ಜನರಲ್ಲಿ ಜಾಗೃತಿಯುಂಟಾಗುತ್ತಿರುವುದು ಇತ್ತೀಚಿನ ಸಂಶೋಧನೆಯ ಮೂಲಕ ದೃಢಪಟ್ಟಿದೆ. ಯುವಕರು ತಂಡ ಕಟ್ಟಿಕೊಂಡು ಸಮಾಜದಲ್ಲಿನ ಸಮಸ್ಯೆಗಳನ್ನು, ಮೂಢನಂಬಿಕೆಗಳನ್ನು ಪರಿಹರಿಸುವಲ್ಲಿ ಹೆಚ್ಚು ಹೆಚ್ಚು ಬೀದಿ ನಾಟಕಗಳನ್ನು ಪ್ರದರ್ಶಿಸಿ ತಮ್ಮ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕೆಂದರು.
ಪ್ರಾರಂಭದಲ್ಲಿ ಪ್ರೊ. ಎಂ.ಎನ್. ಹೊಂಬಾಳಿ ಸರ್ವರನ್ನು ಸ್ವಾಗತಿಸುವದರೊಂದಿಗೆ ಬೀದಿ ನಾಟಕದಲ್ಲಿನ ಪಾತ್ರಧಾರಿಗಳನ್ನು, ಸ್ವಯಂ ಸೇವಕರನ್ನು ಅಭಿನಂದಿಸಿ, ವಂದಿಸಿದರು.