ಅಂತರಂಗ, ಬಹಿರಂಗ ಶುದ್ಧತೆಗೆ ಸಂಕಲ್ಪ ಮಾಡೋಣ : ಚಂದ್ರಶೇಖರ ಸಿ.

0
Swachhta He Seva Program
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಅಂತರಂಗ ಮತ್ತು ಬಹಿರಂಗ ಶುದ್ಧತೆಗೆ ಸಂಕಲ್ಪ ಮಾಡೋಣವೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಕರೆ ನೀಡಿದರು.

Advertisement

ತಾಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಾಳ ಗ್ರಾಮ ಪಂಚಾಯತಿಯಿಂದ ಏರ್ಪಡಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರದ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಸ್ವಚ್ಛತೆ ಎನ್ನುವುದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೇ ವಾಸ್ತವಿಕವಾಗಿರಬೇಕು, ಅಂದಾಗ ಮಾತ್ರ ಗ್ರಾಮದಲ್ಲಿ ಸ್ವಚ್ಛತೆಯ ವಾತಾವರಣ ಕಂಡು ಬರುತ್ತದೆ. ಸ್ವಚ್ಛತೆ ಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕು ಅಂದಾಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ ವಿ ಕಣವಿ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳಲ್ಲಿ ಗಾಂಧೀಜಿಯವರು ಕೂಡಾ ಒಬ್ಬರಾಗಿದ್ದು ಅಂತಹ ಮಹಾತ್ಮರ ದಿನದಂದು ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತಿರುವ ನಿಜಕ್ಕೂ ಒಂದು ಮಹತ್ವ ಕಾರ್ಯ ಎಂದರು. ಪ್ರತಿಯೊಬ್ಬ ಭಾರತೀಯ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಮುಂದೆ ಇಟ್ಟಲ್ಲಿ ದೇಶದ ಸ್ವಚ್ಛತೆಯ ಚಿತ್ರಣವೇ ಬದಲಾಗುವದರಲ್ಲಿ ಸಂದೇಹವಿಲ್ಲವೆಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಆದಿತ್ಯ ಕುಮಾರ್ ಹೆಚ್ ಆರ್. ಗ್ರಾ. ಪಂ. ಅಧ್ಯಕ್ಷ್ಯೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರ್ಗಪ್ಪ ಡಂಬರ, ಇಒ ದುಂಡಪ್ಪ ತುರಾದಿ, ತಹಸೀಲ್ದಾರ್ ವಿಠಲ್ ಚೌಗಲಾ, ಪಿಡಿಒ ಪರಮೇಶ್ವರಯ್ಯ ತೆಲಗಡೆಮಠ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕ ಮಟ್ಟದ ಅಧಿಕಾರಿಗಳು, ಶಿಕ್ಷಕರು, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here