ವಿದೇಶ ಪ್ರವಾಸದ ಆಫರ್ ನೀಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸ್ವಾಮೀಜಿ!

0
Spread the love

ನವದೆಹಲಿ: ದೆಹಲಿಯ ಪ್ರಸಿದ್ಧ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್ಮೆಂಟ್​​ ನಿರ್ದೇಶಕ ಹಾಗೂ ಆಶ್ರಮದ ಮುಖ್ಯಸ್ಥರಾಗಿದ್ದ ಚೈತನ್ಯಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರಕುಳ, ಅತ್ಯಾಚಾರದ ಆರೋಪ ಕೇಳಿಬಂದಿದೆ. ಲೈಂಗಿಕ ಕಿರುಕುಳ ಆರೋಪದ ಮೇಲೆ ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Advertisement
ಎಫ್‌ಐಆರ್‌ನಲ್ಲಿ ಕಿರುಕುಳ ನೀಡಿರುವ ಬಗ್ಗೆ ಯುವತಿಯರ ಹೇಳಿಕೆ ಉಲ್ಲೇಖವಾಗಿದೆ. EWS ಕೋಟಾದಡಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಟಾರ್ಗೆಟ್ ಮಾಡುತ್ತಿದ್ದರು. ಸ್ಕಾಲರ್‌ಶಿಪ್‌ ಕೊಡಿಸುವ, ಅಂಕಗಳನ್ನು ಕಟ್ ಮಾಡುವ, ಮಾರ್ಕ್ಸ್ ಕಾರ್ಡ್ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ವಿದೇಶ ಪ್ರವಾಸದ ಆಫರ್ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ತಡರಾತ್ರಿ ಮೆಸೇಜ್ ಮಾಡಿ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸುತ್ತಿದ್ದರು. ಕಾಲೇಜಿನ ಡೀನ್ ಕೂಡ ಸ್ವಾಮೀಜಿಗೆ ಸಾಥ್ ನೀಡುತ್ತಿದ್ದರು. ಡೀನ್‌ಗೆ ದೂರು ನೀಡಲು ಬಂದರೆ, ಮೆಸೇಜ್‌ಗೆ ಪ್ರತಿಕ್ರಿಯೆ ನೀಡುವಂತೆ ಸಲಹೆ ನೀಡುತ್ತಿದ್ದರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

Spread the love

LEAVE A REPLY

Please enter your comment!
Please enter your name here