ಚಿತ್ರದುರ್ಗ:- ಸ್ವಾಮೀಜಿಗಳು ಅಯೋಗ್ಯರ ಪರ ಪ್ರಚಾರ ಮಾಡಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.
Advertisement
ನಗರದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳೇ ನೀವು ಅಯೋಗ್ಯರ ಪರ ಯಾಕೆ ಪ್ರಚಾರ ಮಾಡುತ್ತೀರಾ? ಇನ್ಮೇಲೆ ಇಂತಹ ಕೆಲಸ ಮಾಡಬೇಡಿ. ಈಗಿರುವ ಪಕ್ಷಗಳು ಯೋಗ್ಯವಲ್ಲ ಅಂತ ಬಹಿರಂಗವಾಗಿ ಆಗದಿದ್ರೆ ಗುಟ್ಟಾಗಿಯಾದರು ನೀವು ಹೇಳಬೇಕು ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ಯಾರಾಗಬೇಕು, ಯಾರನ್ನು ಕಿತ್ತುಹಾಕಬೇಕೆಂಬ ಹೋರಾಟ ನಡೆಯುತ್ತಿದೆ. ವಿಪಕ್ಷದಲ್ಲಿ ಪಾರ್ಟಿ ಅಧ್ಯಕ್ಷ ಯಾರಾಗಬೇಕು, ಆಗದೇ ಇರೋರು ಯಾರಾಗಬೇಕು ಅಂತಿದ್ರೆ, ಇನ್ನೊಬ್ರು ಹೇಳ್ತಾರೆ ಯಾರು ಹೇಗಾದರೂ ಹಾಳಾಗಲಿ ನಾನು, ನನ್ನ ಮಗ, ಮೊಮ್ಮಗ ಏನು ಬೇಕಾದರು ಆಗಲು ಅನುಕೂಲ ಮಾಡಿಕೊಡಿ ಅಂತ ಹೇಳುತ್ತಾರೆ ಎಂದು ಮೂರು ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.