ಮಂಡ್ಯ:- ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರು ಪಲ್ಟಿಯಾಗಿರುವ ಘಟನೆ ಮಂಡ್ಯ-ಮೇಲುಕೋಟೆ ಮುಖ್ಯರಸ್ತೆಯ ಮಾಡಲ ಗೇಟ್ ಬಳಿ ಜರುಗಿದೆ.
ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು, ಓರ್ವ ಕಿರುನಾಲೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಮೇಲುಕೋಟೆಯಿಂದ ಮಂಡ್ಯ ಕಡೆಗೆ ಬರ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದೆ. ಘಟನೆಯಲ್ಲಿ ಓರ್ವ ನೀರಿನಲ್ಲಿ ಕೊಚ್ಚಿಹೋಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಸ್ಥಳಕ್ಕೆ ಶಿವಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆದಿದೆ. ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



