ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಹಾಗೂ ಯುನೈಟೆಡ್ ಫಾರ್ಮ್ ಆಫ್ ಬ್ಯಾಂಕ್ ಯೂನಿಯನ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶುಕ್ರವಾರ ಸಾಯಂಕಾಲ ಗದಗ ನಗರದ ಗಾಂಧಿ ವೃತ್ತದ ಬಳಿಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದರಲ್ಲಿ ಮುಖ್ಯವಾಗಿ ಎಲ್ಲ ವರ್ಗಗಳಲ್ಲೂ ಹೊಸ ನೇಮಕಾತಿ ಮಾಡಲೇಬೇಕು. ಉದ್ಯೋಗ ಹೊರಗುತ್ತಿಗೆ ನೀಡುವುದನ್ನು ವಿರೋಧಿಸಲಾಗುತ್ತಿದೆ. ವಾರದಲ್ಲಿ ಐದು ಕೆಲಸದ ದಿನಗಳನ್ನು ಮಾತ್ರ ಜಾರಿ ಮಾಡಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ ವಿರೋಧ ಇವೇ ಮುಂತಾದ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಅಮರೇಶ್ವರ ಕೆ, ಪ್ರೇಮ್ ಕುಮಾರ್, ಸತೀಶ ರಜಪೂತ, ಪಾಟೀಲ್, ಹನುಮೇಶ, ಯಚ್ಚರಸ್ವಾಮಿ ನಾಯ್ಕ, ವಿಜಯಲಕ್ಷ್ಮಿ ಅಂಗಡಿ, ಶಾಲಿನಿ, ಯಶೋಧಾ ಮುಂತಾದವರು ಪಾಲ್ಗೊಂಡಿದ್ದರು.