ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ಲಕ್ಷೇಶ್ವರ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಟಿ.ಬಿ ಮಾನ್ವಿ ಸರಕಾರಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗುಂಪು ಆಟ-ಬಾಲಕರ ವಿಭಾಗದಲ್ಲಿ ಥ್ರೋಬಾಲ್-ಪ್ರಥಮ, ಕಬಡ್ಡಿ-ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಖೋಖೋ-ಪ್ರಥಮ, ಕಬಡ್ಡಿ- ಪ್ರಥಮ, ಥ್ರೋಬಾಲ್ ದ್ವಿತೀಯ, ವೈಯಕ್ತಿಕ ಆಟಗಳು- ಬಾಲಕಿಯರ ವಿಭಾಗ: 100ಮೀ ಓಟ-ಪ್ರಥಮ, 200ಮೀ ಓಟ ಪ್ರಥಮ, 400ಮೀ ಓಟ ದ್ವಿತೀಯ, 800ಮೀ ಮತ್ತು 3000ಮೀ ಪ್ರಥಮ, 4/100 ರಿಲೇ ಪ್ರಥಮ, ಗುಂಡು ಎಸೆತ ಪ್ರಥಮ, ಬಾಲಕರ ವಿಭಾಗ-ಎತ್ತರ ಜಿಗಿತ ಪ್ರಥಮ, 5000 ಮೀ ಓಟ ಪ್ರಥಮ, ಜಾವಲಿನ್ ಎಸೆತ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ವೀರಾಗ್ರಣಿ ಪ್ರಶಸ್ತಿ ತಂದುಕೊಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಚಂದ್ರು ಲಮಾಣಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿದರು. ಉಪಾಧ್ಯಕ್ಷ ಸುನಿಲ ಮಹಾಂತಶೆಟ್ಟರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ಈ ವೇಳೆ ಸಿಬಿಸಿ ಸದಸ್ಯರಾದ ತೋಂಟೇಶ ಮಾನ್ವಿ, ಶಕ್ತಿ ಕತ್ತಿ, ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಬಸವರಾಜ ಕಲ್ಲೂರ, ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ, ಕ್ರೀಡಾ ಕಾರ್ಯದರ್ಶಿ ಡಾ. ಶಂಕರ್ ಈಟಿ, ಉಪನ್ಯಾಸಕರು, ಸಿಬ್ಬಂದಿ ವರ್ಗದವರಿದ್ದರು.



