ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ಅನ್ನು ಕಾಣಲು ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿನ್ನೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಇನ್ನೂ ಇಂದು ಕೈದಿ ನಂಬರ್ ಆಯ್ತು. ಈಗ ದರ್ಶನ್ ಧರಿಸಿದ್ದ ಮಾದರಿಯ ಟೀ ಶರ್ಟ್ ಟ್ರೆಂಡ್ ಆಗಿದೆ. ದರ್ಶನ್ ಧರಿಸಿದ್ದ ಮಾದರಿಯ ಟೀ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಆರೋಪಿ ದರ್ಶನ್, ಪೂಮಾ ಟೀ ಶರ್ಟ್ ಧರಿಸಿದ್ದರು. ಅದೆ ಮಾದರಿಯ ಟಿ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್ ಮಾಡಿಸಿದ್ದಾರೆ. ಏಳು ಜನರ ತಂಡ ದರ್ಶನ್ ಧರಿಸಿದ ಕಪ್ಪು ಬಣ್ಣದ ಪೂಮಾ ಟೀ ಶರ್ಟ್ ಧರಿಸಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.