T20 World Cup: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತ ಟೀಮ್ ಇಂಡಿಯಾ; ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಸ್ಮೃತಿ!

0
Spread the love

ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ರೋಚಕವಾಗಿ ಸೋಲುವ ಮೂಲಕ ನಿರಾಸೆ ಅನುಭವಿಸಿದೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೀಲಿಯಾ ತಂಡಕ್ಕೆ ಆರಂಭದಲ್ಲಿ ಟೀಂ ಇಂಡಿಯಾ ಬೌಲರ್ಸ್‌ಗಳು ಶಾಕ್ ನೀಡಿದರು. ಆರಂಭಿಕ ಆಟಗಾರ್ತಿ ಬೆತ್ ಮೂನಿ 2, ನಂತರ ಬಂದ ಜಾರ್ಜಿಯಾ ವಾರೆಹಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಟೀಂ ಇಂಡಿಯಾ ಮೇಲುಗೈ ಸಾಧಿಸಿದರು.

ನಂತರ ಬಂದ ನಾಯಕಿ ಮೆಗ್ರಾತ್ ಹಾಗೂ ಆರಂಭಿಕ ಆಟಗಾರ್ತ ಹ್ಯಾರಿಸ್ ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆ ಮೂಲಕ 4ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇದಾದ ಬಳಿಕ ಬಂದ ಎಲ್ಲಿಸ್ ಪೆರ್ರಿ 32 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಟೀಂ ಇಂಡಿಯಾ ಪರ ರೇಣುಕಾ ಸಿಂಗ್ 2, ದೀಪ್ತಿ ಶರ್ಮಾ 2 ಕನ್ನಡತಿ ಶ್ರೇಯಾಂಕ ಪಾಟೀಲ್, ಪೂಜಾ ವಸ್ತ್ರಕಾರ್ ಹಾಗೂ ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

152 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭದಲ್ಲಿ ಶಾಕ್ ಎದುರಾಯಿತು. ಆರಂಭಿಕ ಸ್ಟಾರ್ ಆಟಗಾರ್ತ ಸ್ಮೃತಿ ಮಂದಾನ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಜೆಮಿಮಾ ರೋಡ್ರಿಗಸ್ 16 ರನ್‌ಗೆ ಆಟ ಮುಗಿಸಿದರೆ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 20 ರನ್ ಗಳಿಸಿ ಪೆವಿಲಿಯ್ ಸೇರಿಕೋಂಡರು.

ಇನ್ನೇನು ಟೀಂ ಇಂಡಿಯಾ ಸೋಲು ಖಚಿತ ಎನ್ನುವಾಗ ಕ್ರೀಸ್ ಕಚ್ಚಿ ನಿಂತ ಆಲ್ರೌಂಡರ್ ದೀಪ್ತಿ ಶರ್ಮಾ ಹಾಗೂ ನಾಯಕಿ ಹರ್ಮನ್‌ಪ್ರಿತ್ ಕೌರ್ 63 ರನ್‌ಗಳ ಜೊತೆಯಾಟ ಆಡಿದರು. ಇನ್ನೇನು ತಂಡ ಗದ್ದೆ ಬಿಡ್ತು ಎನ್ನುವಾಗ 29 ರನ್ ಗಳಿಸಿದ್ದ ದೀಪ್ತಿ ಶರ್ಮಾ ಔಟ್ ಆದ ಬಳಿಕ ಬಂದ ಯಾವುದೇ ಆಟಗಾರ್ತಿ ಕೂಡ ತಂಡದ ಗೆಲುವಿಗೆ ಹೋರಾಟ ನಡೆಸಲಿಲ್ಲ.

ಒಂದೆಡೆ ನಿರಂತರವಾಗಿ ವಿಕೆಟ್ ಬೀಳ್ತಾ ಇದ್ರೂ ಕೂಡ ಕ್ರಿಸ್ ಕಚ್ಚಿ ಆಡಿದ ನಾಯಕಿ ಹರ್ಮನ್‌ಪ್ರಿತ್ ಕೌರ್ ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿದರು.

ಅಂತಿಮವಾಗಿ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 14 ರನ್ ಬೇಕಿದ್ದಾಗ ಕೌರ್‌ಗೆ ಸ್ಟ್ರೈಕ್ ಕೊಡುವಲ್ಲಿ ಕೂಡ ಯಾವುದೇ ಆಟಗಾರ್ತಿ ಕೂಡ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸುವ ಮೂಲಕ 9 ರನ್‌ಗಳ ಸೋಲು ಅನುಭವಿಸಿತು.


Spread the love

LEAVE A REPLY

Please enter your comment!
Please enter your name here