HomeGadag Newsಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅವುಗಳ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ನೆಮ್ಮದಿಯನ್ನು ಪಡೆಯಿರಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.

ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಇ-ಖಾತಾ ಅಭಿಯಾನ ಕುರಿತು ನರೇಗಲ್ಲದ ಸಾರ್ವಜನಿಕರಿಗೆ ಎ ಮತ್ತು ಬಿ ಖಾತೆ ಪಡೆದುಕೊಳ್ಳಲು ಭಿತ್ತಿಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಎ ಖಾತೆ ಪಡೆದುಕೊಳ್ಳಲು ಬಯಸುವವರು ಭೂ ಪರಿವರ್ತನಾ ಆದೇಶ, ಬಡಾವಣೆ ನಕ್ಷೆ, ಸ್ವತ್ತಿನ ಮಾಲೀಕತ್ವವನ್ನು ದೃಢೀಕರಿಸುವ ಕ್ರಯ/ದಾನ/ವಿಲ್/ಹಕ್ಕುಪತ್ರ/ವಿಭಾಗ ಪತ್ರ, ನಮೂನೆ 15ರಲ್ಲಿ ಪಡೆದ ಋಣಭಾರ ರಾಹಿತ್ಯ ಪ್ರಮಾಣ ಪತ್ರ(ಇ.ಸಿ), ಮಾಲೀಕರ ಭಾವಚಿತ್ರ, ಸ್ವತ್ತಿನ ಜಿಪಿಎಸ್ ಛಾಯಾಚಿತ್ರ, ಮಾಲೀಕರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿಸಿರುವ ರಸೀದಿ, ವಿದ್ಯುತ್ ಬಿಲ್, ನಲ್ಲಿ ಸಂಪರ್ಕ ಹೊಂದಿದ್ದಲ್ಲಿ ನೀರಿನ ಕಂದಾಯ ಪಾವತಿಸಿರುವ ರಸೀದಿಗಳನ್ನು ಸಲ್ಲಿಸಿ ಎ-ಖಾತೆಯನ್ನು ಪಡೆದುಕೊಳ್ಳಬಹುದು ಎಂದರು.

ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಬಿ ಖಾತೆ ಪಡೆಯಬಯಸುವವರು ಅನಧಿಕೃತ ಬಡಾವಣೆಯ ಭೂ ಪರಿವರ್ತನ ಆದೇಶ, ಸ್ವತ್ತಿನ ಮಾಲೀಕತ್ವದ ಪ್ರಮಾಣಪತ್ರ, ಕಟ್ಟಡವಾಗಿದ್ದಲ್ಲಿ ಕಟ್ಟಡದ ನಕ್ಷೆ ಮತ್ತು ಪರವಾನಗಿ ಪತ್ರ, ಆಸ್ತಿಗೆ ಸಂಬAಧಿಸಿದAತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿ. 10-19-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಇತ್ಯಾದಿಗಳೊಂದಿಗೆ ಕಂದಾಯ ರಸೀದಿ, ನೀರಿನ ರಸೀದಿ, ವಿದ್ಯುತ್ ಬಿಲ್ ಇವುಗಳನ್ನು ಸಲ್ಲಿಸಿ ಬಿ ಖಾತೆಯನ್ನು ಪಡೆಯಬಹುದು ಎಂದರು.

ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಹೆಚ್ಚಿನ ಮಾಹಿತಿ ಏನಾದರೂ ಬೇಕಾದರೆ ದೂರವಾಣಿ-9449483569ಗೆ ಕರೆ ಮಾಡಬಹುದು. ಇಲ್ಲವೆ ಹೆಲ್ಪ್ಲೈನ್ ಸಿಬ್ಬಂದಿ, ಕಂದಾಯ ವಿಭಾಗದ ಕರ ವಸೂಲಿಗಾರರನ್ನು, ಕಂದಾಯ ನಿರೀಕ್ಷಕರನ್ನು ಕಚೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದರು.

ಭಿತ್ತಿಪತ್ರ ವಿತರಣೆಯ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾಮಪ್ಪ ಸೀತಿಮನಿ, ಕಂದಾಯ ಕರ ವಸೂಲಿಗಾರರು, ಹೊನವಾಡ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!