ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ : ತಾಹೇರ್ ಹುಸೇನ್

0
welfare party
Spread the love

ವಿಜಯಸಾಕ್ಷಿ ಸುದ್ದಿ, ಗದಗ : ದೇಶವು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದು, ಮತ್ತೊಮ್ಮೆ ಸರ್ಕಾರ ಬದಲಾಯಿಸುವ ಅವಕಾಶ ನಮ್ಮ ಕೈಯಲ್ಲಿದೆ. ಇಂದು ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ಕೂಡಲೇ ಸ್ವಚ್ಛಗೊಳ್ಳುತ್ತಾರೆ. ಅವರ ಮೇಲಿನ ಆರೋಪದ ತನಿಖೆಗಳು ಸ್ಥಗಿತಗೊಳ್ಳುತ್ತಿದೆ. ಸರಕಾರದ ವಿರುದ್ಧ ದನಿಯೆತ್ತಿದವರನ್ನು ಜೈಲಿಗೆ ಹಾಕಲಾಗುತ್ತಿದೆ. ಇಂತಹವರು ಮರಳಿ ಅಧಿಕಾರಕ್ಕೇರಿದರೆ ದೇಶದ ಭವಿಷ್ಯ ಹೇಗಿರಬಹುದು ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿಯ ಚುನಾವಣೆ ದೇಶದ ಮಟ್ಟಿಗೆ ಬಹಳ ಮಹತ್ತರವಾದದ್ದು. ದೇಶದ ಮತದಾರ ಬಂಧುಗಳು ಈ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಪರಸ್ಪರ ಜಾತಿಯ ಧರ್ಮಗಳ ನಡುವಿನ ಕಲಹಗಳು ಮತ ಬ್ಯಾಂಕ್ ಆಗಿ ಬದಲಾಗುತ್ತದೆ.

ರಾಜ್ಯ ಸರಕಾರ ಬಡವರಿಗೆ ವಿತರಿಸಲು ಅಕ್ಕಿಯನ್ನು ಕೇಳಿದಾಗ ಅದನ್ನು ನೀಡಲು ಹಿಂಜರಿದರು. ಒಟ್ಟಿನಲ್ಲಿ, ದೇಶದ ಜನತೆಯ ಬಗ್ಗೆ ಕಳಕಳಿಯಿರುವ ಜಾತ್ಯಾತೀತ ಅಭ್ಯರ್ಥಿಗಳನ್ನು ಚುನಾಯಿಸಿ ದೇಶವನ್ನು ಪಾರು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here