ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಮಾಂಗಲ್ಯ ಸರ ಟಾರ್ಗೇಟ್ ಮಾಡಿ ಕದಿಯುತ್ತಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ರಮೇಶ್ ಬಂಧಿತ ಆರೋಪಿಯಾಗಿದ್ದು, ಕಳೆದ ತಿಂಗಳು 27 ತಾರೀಖು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ 6 ಗ್ರಾಂ ಚಿನ್ನದ ಸರವನ್ನ ಕಸಿದು ಪರಾರಿಯಾಗಿದ್ದನು.
Advertisement
ಪ್ರಕರಣ ದಾಖಲಿಸಿ ಸಿಸಿಟಿವಿ ಆದರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆಯಲ್ಲಿ 4 ಬೈಕ್ ಹಾಗೂ 1 ಆಟೋ ಕಳಚು ಪ್ರಕರಣವು ಬೆಳಕಿಗೆ ಬಂದಿದ್ದು, ಕದ್ದ ಚಿನ್ನವನ್ನ ಆನೇಕಲ್ ನ ಜುವೆಲ್ಲರಿ ಶಾಪ್ ನಲ್ಲಿ ಅಡವಿಡುತ್ತಿದ್ದನು. ಸದ್ಯ ಬಂಧಿತನಿಂದ 10 ಲಕ್ಷ ಮೌಲ್ಯದ 6 ಗ್ರಾಂ ಚಿನ್ನಾಭರಣ, 4 ಬೈಕ್ ಹಾಗೂ 1 ಆಟೋ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.