ಬಳ್ಳಾರಿ:- ಉಚಿತ, ಉಚಿತ, ನೀವು ಸುಸ್ತಾಗ್ತಿರಿ ಖಚಿತ. ಫ್ರೀ ಬಸ್ ನಲ್ಲಿ ಆರಾಮಾಗಿ ಹೋಗ್ಬಹುದು ಎಂದು ಸೀಟಲ್ಲಿ ಆಯಾಗಿ ಕುಳಿತಿದ್ದ ಈ ಮಹಿಳೆಯರು ಆಮೇಲೆ ಇವರ ಫಜೀತಿ ಅಯ್ಯೋ ಪಾಪ ಅನ್ನಿಸತ್ತೆ.
Advertisement
ಎಸ್, ಜಿಲ್ಲೆಯ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ಮಹಿಳೆಯರೇ ತಳ್ಳಿದ ಘಟನೆ ಜರುಗಿದೆ. ಮಂಗಳವಾರ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಸ್ಸಿನಲ್ಲಿ ಮಹಿಳೆಯರು ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ತಮ್ಮೂರಿಗೆ ತೆರಳುವ ಬಸ್ಸು ಹತ್ತಿದ್ದಾರೆ. ಆದರೆ ಚಾಲಕ ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಬಸ್ಸು ಚಾಲನೆ ಆಗಿಲ್ಲ. ಕೊನೆಗೆ ಬಸ್ಸಿನಿಂದ ಇಳಿದ ಮಹಿಳೆಯರು ಹಿಂದಿನಿಂದ ತಳ್ಳಿದ್ದಾರೆ. ಮಹಿಳೆಯರು ಬಸ್ಸು ತಳ್ಳುತ್ತಿರುವ ವಿಡಿಯೋ ಫುಲ್ ವೈರಲ್ ವೈರಲ್ ಆಗಿದೆ.