ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಆಟಗಳಲ್ಲಿ ಸೋಲು-ಗೆಲುವು ಸಹಜ. ಮಕ್ಕಳಲ್ಲಿ ಸೌಹಾರ್ದಯುತ ಗುಣಗಳನ್ನು ಬಿತ್ತಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ತಾಲೂಕು ಕ್ರಿಡಾಂಗಣದಲ್ಲಿ ಗುರುವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಆರೋಗ್ಯಕರ ಆಹಾರ ಸೇವಿಸುತ್ತಿಲ್ಲ. ಉತ್ತಮ ಆರೋಗ್ಯ ಮತ್ತು ಮಾನಸಿಕ ದೃಢತೆಯನ್ನು ಹೊಂದಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದರು.
ಬಿಇಓ ಲೇಪಾಕ್ಷಪ್ಪ ಮಾತನಾಡಿ, ತಾಲೂಕಿನ ಎಲ್ಲಾ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳಿಗಾಗಿ ಒಂದು ಕೋಟಿಗೂ ಅಧಿಕ ಹಣವನ್ನು ಶಾಸಕರು ನೀಡಿದ್ದಾರೆ. ಓದಿನ ಜೊತೆಗೆ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕ, ಮಾನಸಿಕವಾಗಿ ಸದೃಡರಾಗಲು ತಿಳಿಸಿದರು.
ವೇದಿಕೆಯಲ್ಲಿ ಅರ್ಜುನ್ ಪರುಸಪ್ಪ, ಬಿ.ರಾಜಶೇಖರ್, ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಬ್ಯಾಂಕ್ ಅಧ್ಯಕ್ಷ ಚಂದ್ರಮೌಳಿ, ಎಂ.ರಮೇಶ್, ಇಸ್ಮಾಯಿಲ್ ಎಲಿಗಾರ್, ಶಿವಾಜಿ ನಾಯ್ಕ, ಪಿ.ಸುಬ್ಬಣ್ಣ ಮುಂತಾದವರಿದ್ದರು. ತಾಲೂಕು ದೈಹಿಕ ಪರಿವೀಕ್ಷಕ ಕೆ.ಷಣ್ಮುಖಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಮನೋಹರ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ, ಜನಾರ್ಧನ ರೆಡ್ಡಿ, ಗಿರಜ್ಜಿ ಮಂಜುನಾಥ, ಬರ‍್ಸಿ ಹೊನ್ನತ್ತೆಪ್ಪ, ಲತಾ ಟಿ.ಹೆಚ್, ಲತಾ ರಾಥೋಡ್, ಮಕ್ಬುಲ್ ಭಾಷಾ, ಜಯಣ್ಣ ಪೂಜಾರ್ ಮುಂತಾದವರು ಪಾಲ್ಗೊಂಡಿದ್ದರು.