ವಿಜಯಸಾಕ್ಷಿ ಸುದ್ದಿ, ಗದಗ: ಗ್ಯಾರಂಟಿ ಯೋಜನೆಗಳ ಸಂಪೂರ್ಣ, ಸಮರ್ಪಕ ನಿರ್ವಹಣೆಗಾಗಿ ಗದಗ ತಾಲೂಕಿನಲ್ಲಿ ಜಾರಿಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ಕೆಳಕಂಡ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ದೇವರಡ್ಡಿ ತಿರ್ಲಾಪೂರ ಅವರಿಗೆ ಬಿಂಕದಕಟ್ಟಿ ಮತ್ತು ಅಸುಂಡಿ (ಮೊ-9886066157), ಮಲ್ಲಪ್ಪ ದಂಡಿನ ಅವರಿಗೆ ಅಂತೂರ-ಬೆಟ್ಟೂರ್ ಮತ್ತು ಚಿಂಚಲಿ (ಮೊ-9972046274), ಗಣೇಶಸಿಂಗ್ ಮಿಟಾಡೆ ಅವರಿಗೆ ವಾರ್ಡ್ ನಂ. 11, 12, 13 ಮತ್ತು 14 (ಮೊ-9448540575), ಮಲ್ಲಪ್ಪ ಎಚ್.ಬಾರಕೇರ ಅವರಿಗೆ ವಾರ್ಡ್ ನಂ. 7, 8, ಮತ್ತು 10 (ಮೊ-7022797007), ಭಾಷಾಸಾಬ್ ಮಲ್ಲಸಮುದ್ರ ಅವರಿಗೆ ವಾರ್ಡ್ ನಂ. 17, 18, 23, 25 ಮತ್ತು 33 (ಮೊ-8904363984) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.



