HomeGadag Newsತಾಲೂಕಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ತಾಲೂಕಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಕನ್ನಡ ಜನಾಭಿವೃದ್ಧಿ ವೇದಿಕೆ ಗದಗ ಜಿಲ್ಲಾ ಘಟಕ ಹಾಗೂ ಮುಂಡರಗಿ ತಾಲೂಕು ಘಟಕದ ಆಶ್ರಯದಲ್ಲಿ ಕರ್ನಾಟಕ-51 ಸಂಭ್ರಾಮಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡದಲ್ಲಿ ಕನ್ನಡ-ಕರ್ನಾಟಕ ಎಂಬ ರಸ ಪ್ರಶ್ನೆ ಕಾರ್ಯಕ್ರಮವನ್ನು ಮುಂಡರಗಿಯ ಬರದೂರ ಗ್ರಾಮದ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಷ ಕಿತ್ತೂರ ವಹಿಸಿದ್ದರು. ಅಂದಪ್ಪ ಹಾರೋಗೇರಿ ಮತ್ತು ಮಲ್ಲಪ್ಪ ಗೌರಿಪೂರ ಕಾರ್ಯಕ್ರಮ ಉದ್ಘಾಟಿಸಿದರು. ರಸಪ್ರಶ್ನೆ ಕಾರ್ಯಕ್ರಮಕ್ಕೆ ಸಂತೋಷ ಮಸೂತಿ, ಶರಣಪ್ಪ ಕುರಿ ಚಾಲನೆ ನೀಡಿದರು. ಅತಿಥಿಗಳಾಗಿ ಎಲ್.ಬಿ. ಹುಡೇದ, ಗಣೇಶ ಹಾತಲಗೇರಿ, ಉಮೇಶ ಹಿರೇಮಠ, ಅಶೋಕ ಹೊಸಮನಿ, ಪ್ರೊ. ಮಂಜುನಾಥ ಕುರಿ, ಪ್ರಸಾದ ಆಡಿನ, ಸಂತೋಷ ಹಡಪದ, ಪರಶುರಾಮ ತಿಗರಿ ಉಪಸ್ಥಿತರಿದ್ದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ರೋಣ ಪುರಸಭೆಯ ಮಾಜಿ ಉಪಾಧ್ಯಕ್ಷ ಮಿಥುನ್ ಜಿ.ಪಾಟೀಲ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸಂಘದ ಬಗ್ಗೆ ಹುಲ್ಲೇಶ ಎಚ್.ಭಜಂತ್ರಿ ಮಾತನಾಡಿದರು. ಎಲ್.ಬಿ. ಹುಡ್ಡೇದ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಭುವನೇಶ್ವರಿ ಕಲಕುಟಗರ ಹಾಜರಿದ್ದರು.

ಗಣೇಶ ಹಾತಲಗೇರಿ, ದುರಗಮ್ಮ ತಳಗೇರಿ, ಗಂಗಾಧರ ಅಣ್ಣಿಗೇರಿ, ಎನ್.ಎಂ. ಕೂಕನೂರ, ಎಲ್.ಬಿ. ಹುಡೇದ, ಶರಣಪ್ಪ ಹಳ್ಳಿಕೇರಿ, ಅಮರೇಶ ಹಿರೇಮಠ, ಹೊನ್ನಪ್ಪ ಶಿರಹಟ್ಟಿ, ಉಮೇಶ ಹಿರೇಮಠ, ಸುಭಾಷ ಕಿತ್ತೂರ, ಬಸವರಾಜ ಬಾರಕೇರ, ನೇತ್ರಾವತಿ ಕುರಿ, ನೀಲಮ್ಮ ಹೆಬಸೂರ, ಶಾಂತಾ ನಾಡಗೌಡರ, ಪ್ರಕಾಶ ಸಜ್ಜನ, ಅಶೋಕ ಹೊಸಮನಿ, ಪ್ರಸಾದ ಆಡಿನ್, ಸಂತೋಷ ಹಡಪದ, ಪರಶುರಾಮ ತಿಗರಿ, ಈರಣ್ಣ ಕರಡಿಕೋಳ ಉಪಸ್ಥಿತರಿದ್ದರು. ದಾನೇಶ ಲಮಾಣಿ ಸ್ವಾಗತಿಸಿದರು. ಜಿ.ಎಮ್. ಲಿಂಗಶೆಟ್ಟರ ನಿರೂಪಿಸಿದರು, ಚನ್ನಮ್ಮ ರಿತ್ತಿ ವಂದಿಸಿದರು.

ಗೌಸುಸಾಬ ದೊಟ್ಯಾಹಾಳ, ಶರಣಪ್ಪ ಹಳ್ಳಿಕೇರಿ, ಶರಣಪ್ಪ ಮೈ.ಕುರಿ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು. ಪ್ರಥಮ-ಎನ್.ಎನ್. ಗೊಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸ್ನೇಹಾ ತಳವಾರ, ಪಲ್ಲವಿ ಹಳ್ಳಿಕೇರಿ, ದ್ವಿತೀಯ-ಕೊರ್ಲಹಳ್ಳಿ ಗ್ರಾಮದ ಕೆ.ಎಚ್. ಕುರಡಗಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸೌಜನ್ಯ ಚೌಟಗಿ, ಅಬ್ದುಲ್ ನಬಿ ಇಟ್ನಾಳ, ತೃತೀಯ-ಮುಂಡರಗಿ ನಗರದ ಎಫ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂಧ್ಯಾ ಲಮಾಣಿ, ಭೂಮಿಕಾ ಎಂ.ಪಿ ಪಡೆದುಕೊಂಡರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!