ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ನಟಿಯ ಆಯ್ಕೆ ಹಾಗೂ ಆಕೆಗೆ ನೀಡಲಾಗಿರುವ ದುಬಾರಿ ಸಂಭಾವನೆ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಈ ನಡೆಗೆ ಕನ್ನಡ ಚಿತ್ರರಂಗದ ಕಲಾವಿದರೂ ಬೇಸರ ಹೊರಹಾಕಿದ್ದಾರೆ. ಅಂತೆಯೇ ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ಆಯ್ಕೆ ಸರಿಯಿಲ್ಲ. ನಮ್ಮ ರಾಜ್ಯದವರನ್ನೇ ಮಾಡಬೇಕು ಎಂದು ಸಾಕಷ್ಟು ಜನರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಇದೆ ಎಂದು ಹೇಳಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಯಾಗಲು ನಮ್ಮ ರಾಜ್ಯದಲ್ಲೇ ಬಹಳಷ್ಟು ಜನ ನಟಿಯರು ಇದ್ದರು, ಅವರಲ್ಲೇ ಒಬ್ಬರನ್ನು ರಾಯಭಾರಿಯಾಗಿ ಮಾಡಬಹುದಿತ್ತು ಎಂದರು. ಅಲ್ಲದೇ ತಮನ್ನಾರನ್ನು ಆಯ್ಕೆ ಮಾಡಿದ್ದು ಜಮೀರ್ ಎಂಬ ಬಿವೈ ವಿಜಯೇಂದ್ರ ಆರೋಪಕ್ಕೆ, ವಿಜಯೇಂದ್ರ ನಮ್ಮ ಜೊತೆ ಬಂದಿದ್ರಾ ಆಯ್ಕೆ ಮಾಡೋಕೆ ಎಂದು ಗರಂ ಆದರು.