‘ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ವರ್ತೂರು ಸಂತೋಷ್ ಹಾಗೂ ನಟಿ ತನಿಷಾ ಕುಪ್ಪಂಡ ಒಟ್ಟಿಗೆ ಸ್ಪರ್ಧಿಸಿದ್ದರು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಅದು ಹೊರ ಬಂದ ಬಳಿಕವೂ ಮುಂದುವರೆದಿತ್ತು. ಇಬ್ಬರ ನಡುವಿನ ಅನ್ಯೋನ್ಯತೆ ನೋಡಿ ಪ್ರತಿಯೊಬ್ಬರು ಇಬ್ಬರು ಮದುವೆಯಾಗುತ್ತಾರೆ ಎಂದೇ ಹೇಳುತ್ತಿದ್ದರು. ಇದೀಗ ತನಿಷಾ ಅವರನ್ನು ವರ್ತೂರು ಸಂತೋಷ್ ಅಕ್ಕ ಎಂದು ಕರೆದಿದ್ದು ಹರಡಿರುವ ಗಾಸಿಪ್ ಬಗ್ಗೆ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ವರ್ತೂರು ಸಂತೋಷ್, ‘ತನಿಷಾ ಅವರು ನನ್ನ ಜೊತೆ ಬಿಗ್ ಬಾಸ್ ಸ್ಪರ್ಧಿ ಆಗಿದ್ದರು. ಅವರಿಗೆ ಅಕ್ಕನ ಸ್ಥಾನ ನೀಡಿದ್ದೇನೆ. ಕೆಲವೊಂದು ಕೇಳಿ ಕೇಳಿ ನನಗೆ ಕಿವಿ ತೂತು ಬಿತ್ತು. ಅವರಿಗೂ ಕೆಲವೊಮ್ಮೆ ಮುಜುಗರ ಆಯ್ತು. ಬಿಗ್ ಬಾಸ್ನಲ್ಲಿ ಅವರು ಕೆಂಪು ಬಣ್ಣದ ಸೀರೆ ಉಟ್ಟು ಬಂದಾಗ ನಾನು ಅವರಿಗೆ ಅಕ್ಕ ಎಂದೇ ಕರೆದಿದ್ದು. ವಿಡಿಯೋನ ಈಗಲೂ ಬೇಕಿದ್ರೆ ನೋಡಬಹುದು’ ಎಂದು ಹೇಳಿದ್ದಾರೆ.
‘ಇಬ್ಬರಿಗೂ ಮುಜುಗರ ಆಗಿದೆ. ನನ್ನ ವೈಯಕ್ತಿಕ ನಿಮ್ಮ ಬಳಿ ಕೇಳೋದು, ನಿಮ್ಮ ವೈಯಕ್ತಿಕ ನನ್ನ ಬಳಿ ಕೇಳೋದು ಎಷ್ಟು ಸರಿ? ನನ್ನಿಂದ ಬೇಸರ ಆಗಿದ್ದರೆ ತನಿಷಾಗೆ ಹಾಗೂ ಅವರ ಫ್ಯಾನ್ಸ್ಗೆ ಕ್ಷಮೆ ಕೇಳುತ್ತೇನೆ. ತನಿಷಾಗೆ ನನ್ನ ಅಕ್ಕನ ಸ್ಥಾನ’ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.