ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆಯ ತುದಿಗೆ ತಲುಪುತ್ತಿದೆ. ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ಒಂದೊಂದೇ ಪಾತ್ರಗಳನ್ನು ಪೋಸ್ಟರ್ ಮೂಲಕ ರಿವೀಲ್ ಮಾಡುತ್ತಾ ಚಿತ್ರತಂಡ ಕುತೂಹಲ ಹೆಚ್ಚಿಸುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಹೊಸ ಪೋಸ್ಟರ್ನಲ್ಲಿ ‘ರೆಬೆಕಾ’ ಪಾತ್ರವನ್ನು ಪರಿಚಯಿಸಲಾಗಿದ್ದು, ಈ ಪಾತ್ರದಲ್ಲಿ ನಟಿ ತಾರಾ ಸುತಾರಿಯಾ ನಟಿಸುತ್ತಿರುವುದು ಅಧಿಕೃತವಾಗಿದೆ. ಪಾತ್ರದ ಲುಕ್ ಹಾಗೂ ಪ್ರಸ್ತುತಿ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಕಿಯಾರಾ ಅಡ್ವಾನಿ ಅವರ ‘ನಡಿಯಾ’, ಹುಮಾ ಖುರೇಷಿ ಅವರ ‘ಎಲೆಜೆಬೆತ್’ ಮತ್ತು ನಯನತಾರಾ ಅವರ ‘ಗಂಗಾ’ ಪಾತ್ರಗಳ ಬಗ್ಗೆ ಚಿತ್ರತಂಡ ಸುಳಿವು ನೀಡಿ, ಫಸ್ಟ್ಲುಕ್ ಪೋಸ್ಟರ್ಗಳನ್ನು ರಿಲೀಸ್ ಮಾಡಿತ್ತು. ಈ ಪಾತ್ರಗಳ ಅನಾವರಣದಿಂದಲೇ ಟಾಕ್ಸಿಕ್ ಮೇಲೆ ಹೈಪ್ ಇನ್ನಷ್ಟು ಹೆಚ್ಚಾಗಿದೆ.
ಗೀತು ಮೋಹನ್ದಾಸ್ ಮತ್ತು ಯಶ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಪ್ಯಾನ್-ವರ್ಡ್ ಲೆವೆಲ್ನಲ್ಲಿ ರಿಲೀಸ್ ಆಗಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ವಿಭಿನ್ನ ಪಾತ್ರಗಳೊಂದಿಗೆ ಬಹುಭಾಷಾ ತಾರಾಗಣ ಚಿತ್ರದಲ್ಲಿರುವುದು ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.
ಇನ್ನು ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ಮತ್ತೊಂದು ದೊಡ್ಡ ಅಪ್ಡೇಟ್ ಅಥವಾ ಸ್ಪೆಷಲ್ ಗಿಫ್ಟ್ ಸಿಗಬಹುದೇ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ನಿರ್ಮಾಣವಾಗಿದೆ.



