ಹಿಂದೂಗಳನ್ನೇ ಟಾರ್ಗೆಟ್ ಮಾಡೋ ನೀವು ಮುಸ್ಲಿಮರ ಬಗ್ಗೆ ಮಾತಾಡಿದ್ದೀರಾ!? ಆರ್ ಅಶೋಕ್ ಪ್ರಶ್ನೆ!

0
Spread the love

ಬೆಂಗಳೂರು:- ಹಿಂದೂಗಳ ಟೀಕೆಯೇ ಕಾಂಗ್ರೆಸ್ ಧರ್ಮ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

Advertisement

ಸಾವರ್ಕರ್ ಮಾಂಸ ತಿನ್ನುತ್ತಿದ್ದರು ಎಂಬ ಗುಂಡೂರಾವ್ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟ ಅವರು, ಕಾಂಗ್ರೆಸ್​ನವರಿಗೆ ಹಿಂದುಗಳನ್ನು ಟೀಕೆ ಮಾಡುವುದೇ ಧರ್ಮ ಆಗಿದೆ. ಸಾವರ್ಕರ್ ಸತ್ತು ಸ್ವರ್ಗದಲ್ಲಿದ್ದಾರೆ, ಇನ್ನಾದರೂ ಬಿಡಿ ಅವರನ್ನು. ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ.

ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಹಿಂದು ಧರ್ಮದಲ್ಲಿ ಮಾತ್ರ ಕೆಟ್ಟದು ಇದೆಯೇ? ಬೇರೆ ಧರ್ಮದಲ್ಲಿ ಎಲ್ಲಾ ಒಳ್ಳೆಯದೇ ಇದೆಯೇ ಎಂದು ಅಶೋಕ್ ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here