ಟೈಯರ್ ಸ್ಫೋಟಗೊಂಡು ಟಾಟಾ ಏಸ್ ವಾಹನ ಪಲ್ಟಿ: ಓರ್ವ ಸಾವು, ಹಲವರು ಗಂಭೀರ!

0
Spread the love

ಗದಗ:- ಟೈಯರ್ ಸ್ಫೋಟಗೊಂಡು ಟಾಟಾ ಏಸ್ ವಾಹನ ಪಲ್ಟಿ ಆಗಿರುವ ಘಟನೆ ಗದಗ ಜಿಲ್ಲೆ‌ ಲಕ್ಷ್ಮೇಶ್ವರ ಸಮೀಪದ ರಾಮಗೇರಿ- ಬಸಪೂರ ರಸ್ತೆಯಲ್ಲಿ ಜರುಗಿದೆ.

Advertisement

ಘಟನೆಯಲ್ಲಿ ಓರ್ವ ಸಾವನ್ನಪ್ಪಿದರೆ, ಅನೇಕರಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬಸಪ್ಪ ಮ್ಯಾಗೇರಿ ಅವರನ್ನು ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಇದಾಗಿದ್ದು, ಟಾಟಾ ಏಸ್‌ನ ಹಿಂದಿನ ಚಕ್ರದ ಟೈಯರ್ ಸ್ಪೋಟಗೊಂಡಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಆಗಿದೆ. ಸವಣೂರ ತಾ. ವಡ್ನಿಕೊಪ್ಪ ಗ್ರಾಮದಿಂದ ಕುಂದಗೋಳ‌ ತಾ. ಸಂಶಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗಾಯಗೊಂಡಿದ್ದ ನಾಲ್ವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಲಕ್ಷ್ಮೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here