ತೆರಿಗೆ ಬರೆ: ಸಣ್ಣ ವ್ಯಾಪಾರಿಗಳು ಗಂಟುಮೂಟೆ ಕಟ್ಟಿ ವಾಪಸ್ ಊರಿಗೆ ಹೋಗೋ ಸ್ಥಿತಿ – ಸಿಟಿ ರವಿ ವಾಗ್ದಾಳಿ!

0
Spread the love

ಬೆಂಗಳೂರು: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಬಂದಿರುವ ವಿಚಾರವಾಗಿ MLC ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತೆರಿಗೆ ನೋಟೀಸ್ ಗಳಿಂದ ಸಣ್ಣ ವ್ಯಾಪಾರಿಗಳು ಭೀತಿಗೊಳಗಾಗಿದ್ದಾರೆ,

Advertisement

ಅವರಿಗಿರುವ ಹೆದರಿಕೆ, ಆತಂಕವನ್ನು ಮಧ್ಯವರ್ತಿಗಳು ಎನ್​ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಸಣ್ಣ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮುಚ್ಚಿ ಗಂಟು ಮೂಟೆ ಕಟ್ಟಿ ತಮ್ಮ ಊರುಗಳಿಗೆ ಹೋಗುವ ಯೋಚನೆ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ಸರ್ಕಾರ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟೀಸ್​​ಗಳನ್ನು ಕಳಿಸುತ್ತಿದೆ, ಚಿಕ್ಕ ವ್ಯಾಪಾರಿಗಳನ್ನು ಹೀಗೆ ಗೋಳು ಹೊಯ್ದುಕೊಳ್ಳುವ ಬದಲು ಖಜಾನೆ ಖಾಲಿಯಾಗಿದೆ ಅಂತ ಸರ್ಕಾರ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ, ವ್ಯಾಪಾರಿಗಳನ್ನು ಭಯದಿಂದ ಮುಕ್ತಮಾಡುವ ಏಕೈಕ ಮಾರ್ಗವೆಂದರೆ ಅವರಿಗೆ ಜಾರಿ ಮಾಡಿರುವ ನೋಟೀಸ್​ಗಳನ್ನು ವಾಪಸ್ಸು ಪಡೆಯುವುದು ಎಂದರು


Spread the love

LEAVE A REPLY

Please enter your comment!
Please enter your name here