ವಿಜಯಸಾಕ್ಷಿ ಸುದ್ದಿ, ಗದಗ: ಸದೃಢ, ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅನನ್ಯ ಮತ್ತು ಅಪಾರವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ಪ್ರೇಮಿ ಕೃಷ್ಣ ಸಕ್ರಪ್ಪ ಕಾರಬಾರಿ, ಸುಧಾ ಕೃಷ್ಣ ಕಾರಬಾರಿ ಇವರು ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಕ್ಷರ ದಾಸೋಹದ ಸಹ ನಿರ್ದೇಶಕ ಶಂಕರ ಹಡಗಲಿ ಮಾತನಾಡಿ, ಈ ಸಣ್ಣ ತಾಂಡಾ ಗ್ರಾಮದ ಶಿಕ್ಷಕರು ಅತ್ಯಂತ ಕ್ರಿಯಾಶೀಲರಾಗಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಶಾಲಾಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಪಾರವ್ವ ಉಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಕೃಷ್ಣ ಸಕ್ರಪ್ಪ ಕಾರಬಾರಿ, ಸುಧಾ ಕೃಷ್ಣ ಕಾರಬಾರಿ, ಎಫ್.ಎನ್. ಅತ್ತಿಕಟ್ಟಿ, ಲಾಲಪ್ಪ ಪವಾರ, ಉಮೇಶ ಲಮಾಣಿ, ಮಾರುತಿ ಪವಾರ, ಸಂಗೀತಾ ಮಾರುತಿ ಪವಾರ, ಸೋಮನಾಥ ಲಮಾಣಿ, ವೆಂಕಟೇಶ ರಾಠೋಡ, ಮಹಾಂತೇಶ ರಾಠೋಡ, ಸಿದ್ದಪ್ಪ ಲಮಾಣಿ, ರಾಮಜಿ ಪವಾರ, ಮಂಜಪ್ಪ ಲಕ್ಷ್ಮಣ ರಜಪೂತ, ಹೇಮಣ್ಣ ಲಮಾಣಿ, ಲಕ್ಷ್ಮಣ ಲಮಾಣಿ, ಸಿದ್ದಪ್ಪ ಜಡಿ, ಮೌನೇಶ್ ಲಮಾಣಿ, ಶಂಕರವ್ವ ಲಮಾಣಿ, ಗಂಗವ್ವ ಲಮಾಣಿ, ಸರೋಜಾ ಲಮಾಣಿ, ದೇವಕ್ಕ ಲಮಾಣಿ ಮುಂತಾದವರಿದ್ದರು.
ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ.ಜಿ. ಶಿವಶಿಂಪಿಗೇರ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ. ಅಮ್ಮಿನಭಾವಿ ವಂದಿಸಿದರು.