ರೋಟರಿ ಗದಗ ಸೆಂಟ್ರಲ್‌ನಿಂದ ಶಿಕ್ಷಕರಿಗೆ ಸನ್ಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ರೋಟರಿ ಗದಗ ಸೆಂಟ್ರಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ `ರೋಟರಿ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಸೇವಾಲಾಲ ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಚೇತನ ಅಂಗಡಿ ವಹಿಸಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವ ಶಿಕ್ಷಕರನ್ನು ನಾವೇ ಗುರುತಿಸಿ ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರಾದ ಮಂಜುಳಾ ವಿ.ಕಲಹಾಳ, ಬಿ.ಎಸ್. ಹಳ್ಯಾಳ, ಸಿದ್ದಲಿಂಗಪ್ಪಾ ಕೆ.ಹಗರನ್ನವರ, ತ್ರಿವೇಣಿ ಜಿ.ಕಂಬಾಳಿಮಠ, ವಿನಾಯಕ ಆರ್.ಬಂಡಾ ಅವರನ್ನು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಅಸಿಸ್ಟಂಟ್ ಗವರ್ನರ್ ವಿ.ಕೆ. ಗುರುಮಠ, ರೋಟರಿ ಲಿಟ್ರಸಿ ಚೇರಮನ್ ಪಿಎಜಿ ಎಸ್.ಆಯ್ ಅಣ್ಣಿಗೇರಿ, ಕಾರ್ಯದರ್ಶಿ ರಾಜಶೇಖರ ಉಮನಾಬಾದಿ, ಕೋಶಾಧಿಕಾರಿ ಡಾ. ಪ್ರಭು ಗಂಜಿಹಾಳ ಉಪಸ್ಥಿತರಿದ್ದರು.

ಮಾಜಿ ಅಸಿಸ್ಟಂಟ್ ಗವರ್ನರ್ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ರಾಜಶೇಖರ ಉಮನಬಾದಿ ನಿರೂಪಿಸಿದರು.ಡಾ. ಪ್ರಭು ಗಂಜಿಹಾಳ ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಗದಗ ಸೆಂಟ್ರಲ್‌ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here