ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ಬದುಕು ತ್ಯಾಗಮಯವಾದುದು. ಸಮಾಜದಲ್ಲಿ ಗುರುತರ ಜವಾಬ್ದಾರಿ ಹೊಂದಿದ ಶಿಕ್ಷಕ ವೃತ್ತಿ ಸದಾ ಕಾಲ ಗೌರವಾನ್ವಿತವಾದುದು ಎಂದು ಇನ್ನರ್‌ವ್ಹೀಲ್ ಕ್ಲಬ್‌ನ ಡಿಸ್ಟ್ರಿಕ್ಟ್ ಚೇರಮನ್ ಜ್ಯೋತಿ ಕಿರಣ ದಾಸ್ ಹೇಳಿದರು.
ಅವರು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ದತ್ತು ಶಾಲೆಯಾದ ಬೆಟಗೇರಿಯ ಸರ್ಕಾರಿ ಶಾಲೆ ನಂ ೬ರಲ್ಲಿ ಮುಖ್ಯೋಪಾಧ್ಯಾಯರಿಗೆ ಶಿಕ್ಷಕರ ನೇಷನ್ ಬಿಲ್ಡರ್ ಅವಾರ್ಡ್ ವಿತರಿಸಿ, ಶಾಲೆಯನ್ನು `ಹ್ಯಾಪಿ ಸ್ಕೂಲ್’ ಎಂದು ಘೋಷಿಸಿ ಮಾತನಾಡಿದರು.
ಹಿಂದುಳಿದ ಸರ್ಕಾರಿ ಶಾಲೆಗಳ ಪ್ರಗತಿಯೇ ನಮ್ಮ ಇನ್ನರ್‌ವ್ಹೀಲ್ ಕ್ಲಬ್‌ನ ಗುರಿಯಾಗಿದ್ದು, ಈ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಆಶಾದಾಯಕವಾಗಿರುವುದು ಸಂತಸ ತಂದಿದೆ ಎಂದರು.
ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗೆ ನಮ್ಮೆಲ್ಲರ ಹೋರಾಟವಾಗಿದ್ದು, ಅದಕ್ಕಾಗಿ ಶಾಲೆ ದತ್ತು ಪಡೆದು ಶೈಕ್ಷಣಿಕ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ ಎಂದರು.
ಪಿ.ಡಿ.ಸಿ ಪ್ರೇಮಾ ಗುಳಗೌಡ್ರ ಗದಗ ಪರಿಸರದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸದಾಯಕ ಎಂದರು. ಶಾಲಾ ಮಕ್ಕಳಿಗೆ ನೀರಿನ ಬಾಟಲ್, ರೇನ್‌ಕೋಟ್, ಎಕ್ಸಾಂ ಪ್ಯಾಡ್, ಕುರ್ಚಿ, ಟೇಬಲ್, ಗ್ರಂಥಾಲಯ ಪುಸ್ತಕ, ರ್ಯಾಕ್, ಕ್ರೀಡಾ ಸಾಮಗ್ರಿ, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರಾಯೋಜಕತ್ವವನ್ನು ಇನ್ನರ್‌ವ್ಹೀಲ್ ಕ್ಲಬ್‌ನ ಸದಸ್ಯರಾದ ಪ್ರೇಮಾ ಮೇಟಿ, ಸುವರ್ಣಾ ವಸ್ತçದ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಡಿ.ಎಲ್.ಸಿ.ಸಿ ನಂದಾ ಜಡಭೋಕಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ಸ್ವಾಗತಿಸಿದರು. ಸಿ.ಎಲ್.ಸಿ.ಸಿ ಸುಮಾ ಪಾಟೀಲ ನಿರೂಪಿಸಿದರು. ಮೀನಾಕ್ಷಿ ಕೊರವನವರ ನಿರ್ವಹಿಸಿದರು. ಐ.ಎಸ್.ಓ ಪುಷ್ಪಾ ಭಂಡಾರಿ ವಂದಿಸಿದರು.
ಮುಖ್ಯೋಪಾಧ್ಯಾಯೆ ವ್ಹಿ.ಕೆ. ಮುತಾಲಿಕ್‌ದೇಸಾಯಿ, ಎಸ್.ಎಂ. ಹಳೆಮನಿ, ಎಸ್.ಎಂ. ಕರಡಕಲ್, ವೈ.ಎಚ್. ಹಡಪದ, ಎಸ್.ಎಸ್. ವನಹಳ್ಳಿ, ಎಸ್.ಬಿ. ಇಟಗಿ, ಎ.ಎಚ್. ಚಿಗರಿ, ಎಂ.ಎಸ್. ತೊಂಡಿಹಾಳ ಉಪಸ್ಥಿತರಿದ್ದರು.