ಟಿ20 ವಿಶ್ವಕಪ್ ಆರಂಭವಾದ ನಂತರ 19 ವರ್ಷಗಳಲ್ಲೇ, ಭಾರತ ತಂಡವು ಮೊದಲ ಬಾರಿಗೆ 50 ರನ್ಗಳಿಗಿಂತ ಹೆಚ್ಚು ಅಂತರದಿಂದ ಸೋಲೊಪ್ಪಿಕೊಂಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ 20 ಓವರ್ಗಳಲ್ಲಿ 187 ರನ್ ಗಳಿಸಿತು. ಸೌತ್ ಆಫ್ರಿಕಾ ತಂಡದ ಪರ ಡೇವಿಡ್ ಮಿಲ್ಲರ್ ಅರ್ಧಶತಕ (63) ಬಾರಿದ್ದರು.
ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ ಕೇವಲ 31 ರನ್ ಗಳಿಸುತ್ತ, ಮೂರು ವಿಕೆಟ್ ಕಳೆದುಕೊಂಡಿತು. ಬಳಿಕ ಕೂಡ ಸೌತ್ ಆಫ್ರಿಕಾದ ಬೌಲಿಂಗ್ ದಾಳಿ ತಡೆಯಲು ಸಾಧ್ಯವಾಗದೆ, ಭಾರತ ತಂಡ 18.5 ಓವರ್ಗಳಲ್ಲಿ 111 ರನ್ನಲ್ಲಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 76 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಸೋಲು ಎನ್ನಲಾಗುತ್ತಿದೆ.
2010 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 49 ರನ್ಗಳಿಂದ ಸೋತಿದ್ದು ಈವರೆಗಿನ ಹೀನಾಯ ದಾಖಲೆಯಾಗಿತ್ತು. ಆದರೆ ಈ ಬಾರಿ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಮಕಾಡೆ ಮಲಗಿಸಿದೆ. ಈ ಮೂಲಕ ಭಾರತ ತಂಡಕ್ಕೆ ಟಿ20 ವಿಶ್ವಕಪ್ನಲ್ಲಿ ಹೀನಾಯ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ.



