ಟೀಮ್ ಇಂಡಿಯಾ ಬರೋಬ್ಬರಿ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 176 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅಮೋಘ ಬ್ಯಾಟಿಂಗ್ ನಡೆಸಿದ ಪರಿಣಾಮ ಗೆಲುವಿನ ಸನಿಹಕ್ಕೆ ದಕ್ಷಿಣ ಆಫ್ರಿಕಾ ಬಂದಿತ್ತು.
ನಂತರ ಹಾರ್ದಿಕ್ ಪಾಂಡ್ಯ 16.1ನೇ ಓವರ್ನಲ್ಲಿ ಹೆನ್ರಿಚ್ ಕ್ಲಾಸೆನ್ ಅವರ ವಿಕೆಟ್ ಪಡೆದರು. ಜೊತೆಗೆ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆದುಕೊಂಡರು. ಕೊನೆಯ ಓವರ್ನಲ್ಲಿ ಡೆವಿಡ್ ಮಿಲ್ಲರ್ ಹೊಡೆದ ಬಾಲ್ ಅನ್ನು ಬೌಂಡರಿ ಲೈನ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಅದ್ಭುತವಾಗಿ ಹಿಡಿದರು. ಅಲ್ಲೇ ಪಂದ್ಯಕ್ಕೆ ಟ್ವಿಸ್ಟ್ ಸಿಕ್ಕಿತು.
ಟಿ20 ವಿಶ್ವಕಪ್‌ನಲ್ಲಿ ಸೂರ್ಯನ ಆ ಒಂದು ಕ್ಯಾಚ್ ವಿವಾದ ಸೃಷ್ಟಿಸಿತ್ತು. ಈಗ ಟೀಮ್ ಇಂಡಿಯಾ ವಿಶ್ವಕಪ್ ತೆಗೆದುಕೊಂಡು ಭಾರತಕ್ಕೆ ಬಂದಿದ್ದು ಆಗಿದೆ. ಸೆಲೆಬ್ರೇಷನ್ ಸಹ ಮುಗಿದಿದೆ. ಆದರೂ ಈ ಕ್ಯಾಚ್ ಬಗ್ಗೆ ಚರ್ಚೆ ನಿಂತಿಲ್ಲ. ಕ್ಯಾಚ್ ಬಗ್ಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸ್ಟಾರ್ ಸ್ಪಿನ್ ಬೌಲರ್ ತಬ್ರೇಜ್ ಶಂಸಿ ಸೂರ್ಯ ಹಿಡಿದ ಕ್ಯಾಚ್ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ ಅವರು ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ರೀತಿಯಲ್ಲೇ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕ್ಯಾಚ್ ಅನ್ನು ಪರಿಶೀಲಿಸಲು ಈ ಕ್ರಮವನ್ನು ತೆಗೆದುಕೊಂಡಿದ್ದರೆ ನಟೌಟ್ ಎಂದು ನೀಡಬಹುದಿತ್ತು. ನಮಗೆ ಮೋಸ ಆಗಿದೆ. ಭಾರತ ಮೋಸದಿಂದ ಪಂದ್ಯ ಗೆದ್ದಿದೆ ಎಂದಿದ್ದಾರೆ. ಶಮ್ಸಿ ಪೋಸ್ಟ್ ವೈರಲ್ ಆದ ತಕ್ಷಣ ಜನ ಅವರನ್ನು ಟ್ರೋಲ್ ಮಾಡಿದ್ದಾರೆ.