ಕನ್ನಡದ ನಟಿ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿರುವ ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ನಟಿ ಜ್ಯೋತಿ ರೈ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದಾರೆ. ಕಿಲ್ಲರ್ ಚಿತ್ರದಲ್ಲಿ ಕ್ರೈಮ್ ಥ್ರಿಲ್ಲರ್ ಕಥೆ ಹೇಳೋಕೆ ಜ್ಯೋತಿ ರೈ ಮುಂದಾಗಿದ್ದಾರೆ.
ಸದ್ಯ ರಿಲೀಸ್ ಆಗಿರುವ ಕಿಲ್ಲರ್ ಟೀಸರ್‌ನಲ್ಲಿ ಜ್ಯೋತಿ ರೈ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ರೋಬೋಟ್ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿ ಯಾಕೆ ರೋಬೋಟ್ ಆಗಿ ಬದಲಾಗುತ್ತಾಳೆ. ಅದರ ಅಸಲಿಯತ್ತು ಏನು, ಯಾಕೆ ಎಲ್ಲರನ್ನು ನಾಯಕಿ ಕೊಲ್ಲುತ್ತಾಳೆ ಎಂಬುದು ಟೀಸರ್‌ನಲ್ಲಿ ಕುತೂಹಲ ಮೂಡಿಸಿದೆ.
‘ಕಿಲ್ಲರ್’ ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಟಿಯ ಪತಿ ಪೂರ್ವಜ್ ಅವರೇ ನಿರ್ದೇಶನ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಮೂಡಿ ಬರಲಿದೆ.
‘ಕಿಲ್ಲರ್’ ಚಿತ್ರದ ಜೊತೆ ‘ಮಾಸ್ಟರ್ ಪೀಸ್’ ಎಂಬ ಚಿತ್ರ ಕೂಡ ಜ್ಯೋತಿ ಮಾಡುತ್ತಿದ್ದಾರೆ. ಅದನ್ನು ಪೂರ್ವಜ್ ಅವರೇ ನಿರ್ದೇಶನ ಮಾಡುತ್ತಿದ್ದು, ಮೇನಲ್ಲಿ ಶೂಟಿಂಗ್ ಶುರುವಾಗಲಿದೆ.