ಬೆಳಗಾವಿ:- ಮುಂಬೈಗೆ ಹೊರಟ್ಟಿದ್ದ ವಿಮಾನ ಬೆಳಗಾವಿಯಲ್ಲಿ ತುರ್ತು ಭೂಸ್ಪರ್ಷವಾಗಿದೆ. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ಪ್ರಜ್ಞೆಯಿಂದ 48 ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಸ್ಟಾರ್ ಏರ್ ಕಂಪನಿಯ ವಿಮಾನ ಶನಿವಾರ ಬೆಳಗ್ಗೆ ಬೆಳಗಾವಿಯಿಂದ ಮುಂಬೈಗೆ ಹೊರಟಿತ್ತು. ಬೆಳಗಾವಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಮೇಲೆ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡಿದೆ.
ಕೂಡಲೇ ಅಲರ್ಟ್ ಆದ ಪೈಲೆಟ್ 15 ನಿಮಿಷಗಳಲ್ಲೇ ಮತ್ತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಪೈಲಟ್ನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಸ್ಟಾರ್ ಏರ್ ಕಂಪನಿ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ, ಮುಂಬೈಗೆ ಕಳುಹಿಸಿಕೊಟ್ಟಿದ್ದಾರೆ. ವಿಮಾನಯಾನ ಸಂಸ್ಥೆ ತಾಂತ್ರಿಕ ದೋಷ ಬಗ್ಗೆ ಮಾಹಿತಿ ಪಡೆಯುತ್ತಿದೆ.
ಘಟನೆ ಸಂಬಂಧ ಪ್ರಯಾಣಿಕರು ಮಾತನಾಡಿ, ಇಂದು ಬೆಳಗ್ಗೆ 7.50ಕ್ಕೆ ವಿಮಾನ ಟೆಕ್ ಅಫ್ ಆಗಿತ್ತು. ಕೆಲವೇ ಹೊತ್ತಿನಲ್ಲಿ ವಿಮಾನ ಏಕಾಏಕಿ ಟರ್ನ್ ಆಯ್ತು. ಈ ವೇಳೆ ಬಹಳಷ್ಟು ಭಯ ಅಗಿತ್ತು. ಲ್ಯಾಂಡ್ ಆಗುವ ಸಂದರ್ಭದಲ್ಲಿ ಪೈಲಟ್, ಮತ್ತೆ ಬೆಳಗಾವಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುತ್ತಿದ್ದೇವೆ ಅಂತ ಹೇಳಿದರು ಎಂದು ತಿಳಿಸಿದರು.