ಹುಬ್ಬಳ್ಳಿ:- ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ದುರಂತ ತಪ್ಪಿದೆ.
ಹೌದು, ಬೆಂಗಳೂರಿನಿಂದ ನಿನ್ನೆ ಸಂಜೆ 6:45ಕ್ಕೆ ಬಿಟ್ಟು 7:45ಕ್ಕೆ ಹುಬ್ಬಳ್ಳಿಗೆ ಬಂದಿದ್ದ 6ಇ7162 ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಆಕಾಶದಲ್ಲಿ 30 ನಿಮಿಷಗಳ ವಿಮಾನ ಸುತ್ತಾಟ ನಡೆಸಿದೆ.
ಪೈಲಟ್ ಚಾಣಾಕ್ಷತನದಿಂದ 70ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿದಂತಾಗಿದೆ. 30 ನಿಮಿಷಗಳು ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಾಣಿಕರು ಕುಳಿತಿದ್ದರು. ಸುಮಾರು 8:15ಕ್ಕೆ ಲ್ಯಾಂಡ್ ವಿಮಾನ ಲ್ಯಾಂಡ್ ಆಗಿದೆ ಎಂದು ವರದಿ ಆಗಿದೆ.



